

ಬೆಂಗಳೂರು: ಮುಂದಿನ ಬಜೆಟ್‌ನೊಳಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಶಿಾರಸುಗಳ ಸಹಿತ ವರದಿ ಸಲ್ಲಿಸಲಾಗುವುದು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಮಾಹಿತಿ ನೀಡಿದರು.
ವಿಕಾಸಸೌಧದಲ್ಲಿ ಬುಧವಾರ ನಡೆದ ಆಯೋಗದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಆದ್ಯತಾ ವಲಯಗಳನ್ನು ಗುರುತಿಸಿ, ಐದು ಉಪಸಮಿತಿಗಳನ್ನು ರಚಿಸುವ ತೀರ್ಮಾನ ಪ್ರಕಟಿಸಿದರು. ಜತೆಗೆ ಆಯಾ ಉಪಸಮಿತಿಗಳ ವ್ಯಾಪ್ತಿಗೆ ಬರುವ ಇಲಾಖೆಗಳನ್ನು ವಿವರಿಸಿದರು.
ನವೆಂಬರ್ ಗಡುವು
ಉಪಸಮಿತಿಗಳು ಸಂಬಂಧಿಸಿದ ಇಲಾಖೆಗಳ ಜತೆಗೆ ಸಭೆ, ಚರ್ಚೆ ನಡೆಸಿ ಯೋಜನೆಗಳು, ನೀತಿ ನಿರ್ಧಾರಗಳ ಅಗತ್ಯತೆ ಬಗ್ಗೆ ಸ್ಪಷ್ಟ ಅಭಿಪ್ರಾಯಗಳೊಂದಿಗೆ ವಲಯವಾರು ಪ್ರಸ್ತಾವನೆಗಳನ್ನು ನವೆಂಬರ್ 14ರೊಳಗೆ ಸಲ್ಲಿಸಬೇಕು.
ನಂತರ ಪ್ರಸ್ತಾವನೆಗಳನ್ನು ಜಿಲ್ಲಾ ಯೋಜನಾ ಸಮಿತಿಗಳಿಗೆ ಕಳುಹಿಸಿ ಹಿಮ್ಮಾಹಿತಿ ಪಡೆದು, ಸಂಬಂಧಿಸಿದ ಸಚಿವರೊಂದಿಗೆ ಸಭೆಗಳನ್ನು ಡಿಸೆಂಬರ್ 14ರೊಳಗೆ ಪೂರ್ಣಗೊಳಿಸಿ ಬಜೆಟ್‌ಗೆ ಮುನ್ನ ಹಣಕಾಸು ಖಾತೆ ಹೊಂದಿರುವ ಸಿಎಂ ವರದಿ ಮಂಡಿಸಲಾಗುವುದು ಎಂದು ತಿಳಿಸಿದರು.
ಆಯೋಗ ಸಲ್ಲಿಸಿದ ಶಿಾರಸುಗಳು, ವರದಿಯನ್ನು ಸರ್ಕಾರ ಪರಿಗಣಿಸುವುದು ಕಡ್ಡಾಯವೇನಲ್ಲ, ಇದೊಂದು ಸಲಹಾ ಸಂಸ್ಥೆಯಷ್ಟೇ. ಹಣಕಾಸಿನ ಲಭ್ಯತೆ, ಕಾರ್ಯಸಾಧು, ಅವಶ್ಯಕತೆಗೆ ತಕ್ಕಂತೆ ಪರಿಗಣಿಸುವ ಸಾಧ್ಯತೆಗಳಿವೆ.
ಬಜೆಟ್‌ನಲ್ಲಿ ಆಯೋಗದ ಶಿಾರಸು, ವರದಿಯಲ್ಲಿನ ಅಂಶಗಳನ್ನು ಸೇರಿಸುವುದು ಅಥವಾ ಬಿಡುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಸದಸ್ಯರಿಗೆ ಬಿ.ಆರ್.ಪಾಟೀಲ ಮನಮರಿಕೆ ಮಾಡಿಕೊಟ್ಟರು.
ಸಭೆಯಲ್ಲಿ ಆಯೋಗದ ಎಲ್ಲ ಸದಸ್ಯರು, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ, ಆಯೋಗದ ಕಾರ್ಯದರ್ಶಿ ರಮಣದೀಪ್ ಚೌಧರಿ ಇದ್ದರು.
ಶಿಕ್ಷಣ ಮತ್ತು ಕೌಶಲ: ಪ್ರೊ.ವಿ.ಪಿ.ನಿರಂಜನಾರಾಧ್ಯ, ಎ.ನಾರಾಯಣ, ಡಾ.ಬಿ.ಎಚ್.ನಾಗೂರ, ಪ್ರತಾಪ್ ಹೆಗ್ಡೆ, ಡಾ.ರಝಾಕ್ ಉಸ್ತಾದ್, ಎನ್.ಕೆ.ಸಂಗೀತ, ಡಾ.ಟಿ.ಆರ್.ಚಂದ್ರಶೇಖರಯ್ಯ.
ಆರೋಗ್ಯ, ಪೋಷಣೆ, ನೈರ್ಮಲ್ಯ ಮತ್ತು ನೀರು ಸರಬರಾಜು: ಲತಾರಾವ್ ಶೇಷಾದ್ರಿ, ಮೈತ್ರೇಯಿ ಕೃಷ್ಣನ್, ಮಧುಭೂಷಣ್, ಡಾ.ಟಿ.ಆರ್.ಚಂದ್ರಶೇಖರಯ್ಯ, ಅಲಿಬಾಬಾ ಬಿನ್ ಇನಾಯತ್ ಅಲಿ, ಎಸ್.ಮೋಹನ್‌ದಾಸ್ ಹೆಗ್ಡೆ, ಡಾ.ರಝಾಕ್ ಉಸ್ತಾದ್.
ಪರಿಸರ-ಹವಾಮಾನ ಬದಲಾವಣೆ: ಡಾ.ನಾಗೇಶ ಹೆಗಡೆ, ಡಾ.ಹರೀಶ್ ಹಂದೆ, ವಿ.ಎಸ್.ಪ್ರಕಾಶ್, ಡಾ.ಎಚ್.ಮಂಜುನಾಥ, ಮುಕುಂದ ಬೆಳಗಲಿ.
ಕೃಷಿ ಮತ್ತು ಕೃಷಿ ಸಂಬಂಧಿತ ವಲಯ: ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ವಿ.ಗಾಯತ್ರಿ, ನರೇಂದ್ರಪಾಣಿ, ಡಾ.ಎಚ್.ಮಂಜುನಾಥ, ಎಸ್.ಮೋಹನ್‌ದಾಸ್ ಹೆಗ್ಡೆ, ಡಾ.ಬಿ.ಎಚ್.ನಾಗೂರ, ಡಾ.ಹರೀಶ್ ಹಂದೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ, ದುರ್ಬಲ ವರ್ಗ, ಕಾರ್ಮಿಕ ವಲಯ: ಮೈತ್ರೇಯಿ ಕೃಷ್ಣನ್, ಮಧುಭೂಷಣ್, ನರೇಂದ್ರಪಾಣಿ, ಅಲಿಬಾಬಾ ಬಿನ್ ಇನಾಯತ್ ಅಲಿ, ಮುಕುಂದ ಬೆಳಗಲಿ, ಎಸ್.ಮೋಹನ್‌ದಾಸ್ ಹೆಗ್ಡೆ.