

ಶಿವಮೊಗ್ಗ: ತಮಿಳು ಸೇವಾ ಸಂಘದಿಂದ ಹಾಸ್ಯ ಹರಟೆ ಕಾರ್ಯಕ್ರಮವನ್ನು ಮಾ.24ರಂದು ಸಂಜೆ 4ಕ್ಕೆ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ವೆಂಕಟೇಶ್ ತಿಳಿಸಿದರು.
ಮನೆಗೂ ಮತ್ತು ನಾಡಿಗೂ ಸಂತೋಷ ಕೊಡುವವರು ಪುರುಷರಾ ಅಥವಾ ಮಹಿಳೆಯರಾ? ವಿಷಯ ಕುರಿತು ಖಾಸಗಿ ವಾಹಿನಿಯ ಹರಟೆ ಕಾರ್ಯಕ್ರಮದ ನಿರೂಪಕ ಮಧುರೈ ಮುತ್ತು, ನಟಿ ಅನ್ನಭಾರತಿ ಮತ್ತು ಸಂಗಡಿಗರಿಂದ ವಿಭಿನ್ನ ಹಾಸ್ಯ ಹರಟೆ ಮತ್ತು ಮಿಮಿಕ್ರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಮಿಳು ಸಮಾಜದವರಿಗೆ ಮನೋರಂಜನೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲ ಸಮಾಜದವರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳಿಂದಲೂ ಅನುಮತಿ ಪಡೆದುಕೊಳ್ಳಲಾಗಿದೆ. 600ರಿಂದ 800 ಜನರು ಸೇರುವ ನಿರೀಕ್ಷೆ ಇದೆ ಎಂದರು.
ತಮಿಳು ಸಂಘವು ಅನೇಕ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದೆ. ಈಗಾಗಲೇ ಹಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಮನೆ ಮಾತಾಗಿದೆ ಎಂದು ಹೇಳಿದರು. ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಉಪಾಧ್ಯಕ್ಷ ವಿ.ಪರಿಶುರಾಮ್, ಕಾರ್ಯದರ್ಶಿ ಎ.ಎಂ.ಮಂಜುನಾಥ್, ಸಹಕಾರ್ಯದರ್ಶಿಗಳಾದ ಡಿ.ಕಾಮರಾಜ್, ಎ.ಮೂರ್ತಿ, ಖಜಾಂಚಿ ಜಿ.ಮಹೋರ್, ನಿರ್ದೇಶಕರಾದ ಎ.ಮುನಿಸ್ವಾಮಿ, ಆರ್.ಶೇಖರ್, ದೊರೈಸ್ವಾಮಿ, ಡಿ.ಸುರೇಶ್, ಜಿ.ಆರ್.ರಾಮು, ಕೆ.ಶರವಣ, ಪಿ.ಪರಮೇಶಿ, ಎನ್.ಕುಮಾರ್, ಜಯಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.