ಕಾಮೆಡ್ ಕೆ ಫಲಿತಾಂಶ ದಿನಾಂಕ ಪ್ರಕಟ

Comed K
Published on

ಬೆಂಗಳೂರು: ‘ಆಪರೇಷನ್ ಸಿಂಧೂರ್’ನಿಂದ ಮುಂದೂಡಿಲ್ಪಟ್ಟಿದ್ದ ಕಾಮೆಡ್ ಪರೀಕ್ಷೆಯನ್ನು ಭಾನುವಾರ 2ನೇ ಹಂತದಲ್ಲಿ ದೇಶದ ವಿವಿಧ 7 ರಾಜ್ಯಗಳಲ್ಲಿ ಯಶಸ್ವಿಯಾಗಿ ನಡೆಸಿತು.

ರಾಜಸ್ಥಾನ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ನೀರ, ದೆಹಲಿ ಮತ್ತು ಉತ್ತರಾಖಾಂಡ್ ರಾಜ್ಯಗಳ 30 ನಗರಗಳಲ್ಲಿ ಪರೀಕ್ಷೆಯು ಶಾಂತಿಯುತವಾಗಿ ಜರುಗಿತು. ಒಟ್ಟಾರೆ 6,639 ವಿದ್ಯಾರ್ಥಿಗಳಲ್ಲಿ 4,335 (ಶೇ.68) ಮಂದಿ ಹಾಜರಾಗಿದ್ದರು.

ಮೊದಲ ಹಂತದ ಪರೀಕ್ಷೆಯು ಮೇ 10ರಂದು ಕರ್ನಾಟಕ ಸೇರಿ ದೇಶದ 23 ರಾಜ್ಯಗಳಲ್ಲಿ ನಡೆದಿತ್ತು. ಎರಡೂ ಹಂತದ ಪರೀಕ್ಷೆಯ ಅಂತಿಮ ಕೀ ಉತ್ತರ ಮತ್ತು ಫಲಿತಾಂಶವನ್ನು ಜೂನ್ 7ರಂದು ಪ್ರಕಟಿಸಲಾಗುವುದು ಎಂದು ಕಾಮೆಡ್ ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಎಸ್. ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net