

ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ಗೆ ಗೋಮೂತ್ರವೇ ಮದ್ದು. 6 ಸಾವಿರ ವರ್ಷಗಳ ಹಿಂದೆ ಅರಕಲಗೂಡು ತಾಲೂಕಿನ ಮಲ್ಲಪ್ಪನಹಳ್ಳಿ ದೊರೆತಿರುವ ತಾಳೆಗರಿಯಲ್ಲಿ ದೇಶದ ಈಶಾನ್ಯ ಭಾಗದಲ್ಲಿ ವಿಷಗಾಳಿ ಬೀಸುತ್ತದೆ ಎಂದು ಉಲ್ಲೇಖಿಸಿದ್ದಾರೆ ಎಂದು ಅವಧೂತರಾದ ವಿನಯ್ ಗುರೂಜಿ ಅವರು ಹೇಳಿದ್ದಾರೆ.
ಹಾಸನದ ಮಲ್ಲಪ್ಪನಹಳ್ಳಿಯ ಮಲ್ಲಿಕಾರ್ಜುನ ದೇವಾಲಯದ ಶಂಕುಸ್ಥಾಪನೆ ವೇಳೆ ಮಾತನಾಡಿದ ಅವರು ಜನರು ರಸ್ತೆಗಳಲ್ಲಿ ಸಾಯುತ್ತಾರೆ ಎಂದು ಭವಿಷ್ಯವನ್ನು ಕಂಡಿದ್ದರು. ಅಣು ವಿಜ್ಞಾನದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಕರೊನಾ ವೈರಸ್ಗೆ ಔಷಧ ಇಲ್ಲ ಎನ್ನುವುದು ಮೂರ್ಖತನ, ಅದಕ್ಕೆ ಗೋ ಮೂತ್ರವೇ ಪರಿಣಾಮಕಾರಿಯಾದ ಔಷಧವಾಗಬಲ್ಲದು ಎಂದಿದ್ದಾರೆ.
ಗೋ ಮೂತ್ರದೊಂದಿಗೆ 40 ಗಿಡಮೂಲಿಕೆಗಳನ್ನು ಸೇರಿಸಿದರೆ ಕರೊನಾ ವೈರಸ್ ಗುಣವಾಗುತ್ತೆ ಎಂದು ತಾಳೆಗರಿಯಲ್ಲಿ ಉಲ್ಲೇಖವಿದೆ ಎಂದು ತಿಳಿಸಿದರು.