

ಕೊಲಂಬಿಯಾ: ಸೈಕಲಿಂಗ್ ಸ್ಪರ್ಧೆ ನಡೆಯುತ್ತಿರುವಾಗಲೇ ಮತ್ತೋರ್ವ ಸೈಕ್ಲಿಸ್ಟ್ ಮೇಲೆ ಹಲ್ಲೆ ಮಾಡಿದ ಕೊಲಂಬಿಯಾದ ಸ್ಪರ್ಧಿ ಜುಬನ್ ಸಬ್ಸ್ಟೈನ್ ಮೊಲನೊವನ್ನು ಅನರ್ಹಗೊಳಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಆರನೇ ಹಂತದ ಪಂದ್ಯ ಇದಾಗಿದ್ದು, ಫ್ರಾನ್ಸ್ನ ಹುಗೊ ಪೆಜ್ ಜತೆ ಮಾತಿಗಿಳಿದ ಮೊಲನೊ ನಂತರ ಕಪಾಳಮೋಕ್ಷ ಮಾಡುತ್ತಾರೆ. ಸದ್ಯ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪಂದ್ಯ ಮುಗಿದ ಕೂಡಲೇ ಅನರ್ಹಗೊಳಿಸಲಾಗಿದೆ.
ಪಂದ್ಯ ಮುಗಿದ ಬಳಿಕವೂ ಇಬ್ಬರೂ ಆಟಗಾರರು ಜಗಳವಾಡಿದ್ದಾರೆ. ಇದರಿಂದ ರೋಸಿಹೋದ ಆಡಳಿತ ಸಂಸ್ಥೆ ಮೊಲನೊ ದುರ್ವರ್ತನೆ ತೋರಿದ್ದಾರೆ ಎಂದು ಅಮಾನತುಗೊಳಿಸಿದೆ. (ಏಜೆನ್ಸೀಸ್)