ಫೋನ್​ ನಂಬರ್​ ಬ್ಲಾಕ್! ಯುವಕ ದುರಂತ ಅಂತ್ಯ; ಡೆತ್​ನೋಟ್​ನಲ್ಲಿ ಬರೆದಿದ್ದ ಭಾವುಕ ಸಂದೇಶ | College Student

ವಿಜಯವಾಣಿ (47)
Published on

College Student: ತಾನು ಪ್ರೀತಿಸುತ್ತಿದ್ದ ಹುಡುಗಿ ಫೋನ್​ ಎತ್ತಲಿಲ್ಲ ಎಂದು ಮನನೊಂದ ಯುವಕ, ಆಕೆ ತನ್ನ ಫೋನ್ ನಂಬರ್​ನ ಬ್ಲಾಕ್ ಮಾಡಿದ ವಿಷಯ ತಿಳಿದು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರದಲ್ಲಿ ಸಂಭವಿಸಿದೆ.

ಮೃತ ಯುವಕನನ್ನು ಕೇರಳ ಮೂಲದ ಮೊಹಮ್ಮದ್ ಶಬ್ಬೀರ್ ಎಂದು ಗುರುತಿಸಲಾಗಿದೆ. ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಈತ, ಯುವತಿಯೊಂದಿಗೆ ಪ್ರೇಮ ಸಂಬಂಧದಲ್ಲಿದ್ದ. ಆದರೆ, ಆಕೆ ಕೆಲವು ದಿನಗಳಿಂದ ಫೋನ್ ಎತ್ತದೆ ಇದ್ದದ್ದು, ತೀರ ಗೊಂದಲ ಮೂಡಿಸಿತ್ತು. ಕಡೆಗೆ ತನ್ನ ಮೊಬೈಲ್ ಸಂಖ್ಯೆಯನ್ನು ಪ್ರೇಯಸಿ ಬ್ಲಾಕ್​ ಮಾಡಿರುವುದನ್ನು ಅರಿತ ಯುವಕ ದುರಂತ ಅಂತ್ಯ ಕಂಡಿದ್ದಾನೆ.

ಬ್ಲಾಕ್​ ಪಟ್ಟಿಗೆ ತನ್ನ ಫೋನ್ ನಂಬರ್​ ಹಾಕಿದ್ದಾಳೆ ಎಂದು ತಿಳಿದು ತೀರ ಮನನೊಂದ ಶಬ್ಬೀರ್​,​ ಹಾಸ್ಟೆಲ್ ರೂಮ್​ನಲ್ಲಿ ಟವಲ್‌ನಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಇದಕ್ಕೂ ಮೊದಲು, ಡೆತ್​ನೋಟ್​ನಲ್ಲಿ ಆತ, "ನಾನು ನಿನ್ನನ್ನು ತುಂಬ ಪ್ರೀತಿಸುತ್ತಿರುವೆ. ಸದಾ ನೀನು ನನ್ನೊಂದಿಗೆಯೇ ಇರುವೆ" ಎಂದು ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net