ಕಾಶ್ಮೀರಿ ವಿದ್ಯಾರ್ಥಿನಿಯ ಎದೆಗೆ ಗುದ್ದಿದ ಕಾಲೇಜಿನ ಮೆಸ್ ಸಿಬ್ಬಂದಿ ಅರೆಸ್ಟ್​​ ..Video Viral

Video Viral
Published on

ದೆಹಲಿ: 24 ವರ್ಷದ ಕಾಶ್ಮೀರಿ ವಿದ್ಯಾರ್ಥಿನಿಯ ಎದೆಗೆ ಗುದ್ದಿದ್ದ ಆರೋಪದ (video viral) ಮೇಲೆ ಮೆಸ್ ಕೆಲಸಗಾರನ್ನು ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರ ರಾಜಧಾನಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಕಾಶ್ಮೀರಿ ಮಹಿಳಾ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವಿಶ್ವವಿದ್ಯಾಲಯದ ಮೆಸ್ ಸಿಬ್ಬಂದಿಯನ್ನು ಸೋಮವಾರ(ಏ.28) ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಾಕು ಪ್ರಾಣಿಗಳಿಂದ ಒತ್ತಡ ನಿವಾರಣೆ ನಡೆದಿದ್ದೇನು? ಏಪ್ರಿಲ್ 27 ರಂದು ರಾತ್ರಿ 9:30ರ ಸುಮಾರಿಗೆ 24 ವರ್ಷದ ದ್ವಿತೀಯ ಎಂಎ ವಿದ್ಯಾರ್ಥಿನಿಯ ಮೇಲೆ 22 ವರ್ಷದ ಮೆಸ್ ಕೆಲಸಗಾರ ಅಬಿದ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

"ಆರೋಪಿಯನ್ನು ಅದೇ ರಾತ್ರಿ ಬಂಧಿಸಲಾಯಿತು. ವಿದ್ಯಾರ್ಥಿನಿ ಇನ್ನೂ ಔಪಚಾರಿಕ ದೂರು ದಾಖಲಿಸಿಲ್ಲ, ಆದರೆ ಇಂದು ದೂರು ದಾಖಲಿಸುವ ನಿರೀಕ್ಷೆಯಿದೆ, ನಂತರ ಎಫ್‌ಐಆರ್ ದಾಖಲಿಸಲಾಗುವುದು, ವೈಯಕ್ತಿಕ ವಿಷಯದಿಂದ ಈ ವಾಗ್ವಾದ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net