ಅನುಭವ ಹಂಚಿಕೊಳ್ಳಲು ಕಾಲೇಜು ಸೂಕ್ತ ಜಾಗ

ashok pai
ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಸಮೂಹ ಸಂಸ್ಥೆಗಳ ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್ ಘಟಕಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಂಗಕರ್ಮಿ ವಿದ್ಯಾ ಹೆಗಡೆ ಉದ್ಘಾಟಿಸಿದರು. ಕೆ.ವಿ.ಅಕ್ಷರ, ಡಾ. ಸಂಧ್ಯಾ ಕಾವೇರಿ, ಡಾ. ರಜನಿ ಪೈ, ಡಾ. ಪ್ರೀತಿ ಶಾನುಭಾಗ್, ಪ್ರೊ. ರಾಜೇಂದ್ರ ಚೆನ್ನಿ ಮುಂತಾದವರಿದ್ದರು.
Published on

ಶಿವಮೊಗ್ಗ: ಶಿಕ್ಷಣ ಎಂಬುದು ಒಬ್ಬ ವ್ಯಕ್ತಿಗೆ ಮರುಜನ್ಮವಿದ್ದಂತೆ. ಅಗತ್ಯ ವಿದ್ಯೆಗಳನ್ನು ತಿಳಿದುಕೊಂಡು ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅವಶ್ಯ ರಂಗಕರ್ಮಿ, ಸಾಹಿತಿ ಕೆ.ವಿ.ಅಕ್ಷರ ಹೇಳಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಸಮೂಹ ಸಂಸ್ಥೆಗಳ ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್ ಘಟಕಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ವಿವಿಧ ವರ್ಗ, ಜಾತಿಗಳಿಗೆ ಸೇರಿದ ವ್ಯಕ್ತಿಗಳು ಜೀವನದ ಅನುಭವಗಳನ್ನು ಹಂಚಿಕೊಳ್ಳಲು ಕಾಲೇಜು ಸೂಕ್ತ ಜಾಗ. ವಿಶೇಷ ಜ್ಞಾನದೊಂದಿಗೆ ಪ್ರಾಪಂಚಿಕ ಜ್ಞಾನವನ್ನೂ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಂಗಕರ್ಮಿ ವಿದ್ಯಾ ಹೆಗಡೆ ಮಾತನಾಡಿ, ರಂಗಭೂಮಿಯು ನನಗೆ ಜನರೊಂದಿಗೆ ಒಡನಾಟ ಕಲಿಸಿದೆ. ನಮ್ಮಲ್ಲಿ ಸಾಮಾಜಿಕ ತಾರತಮ್ಯವಿದೆ ಎಂದು ತಿಳಿದುಕೊಳ್ಳಲು ರಂಗಭೂಮಿ ಸಹಕಾರಿ. ಹೊರಗಿನ ಪ್ರಪಂಚವನ್ನು ಗಮನಿಸುತ್ತಲೇ ನಮ್ಮನ್ನು ಅರಿತುಕೊಳ್ಳಬೇಕಿದೆ. ಕಾಲೇಜು ಜೀವನ ಮುಗಿದ ನಂತರವೂ ವಿಭಿನ್ನ ವ್ಯಕ್ತಿಗಳನ್ನು ಭೇಟಿಯಾಗಬೇಕು ಎಂದು ತಿಳಿಸಿದರು.
ಮಾನಸ ಟ್ರಸ್ಟ್ ನಿರ್ದೇಶಕಿ ಡಾ. ರಜನಿ ಪೈ ಮಾತನಾಡಿ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ವಿವಿಧ ಆಯಾಮಗಳಲ್ಲಿ ಮೈಲಿಗಲ್ಲನ್ನು ದಾಟಿದೆ. ಕಳೆದ ಆರು ವರ್ಷಗಳಲ್ಲಿ ಹಲವಾರು ಸಾಧನೆಗಳನ್ನು ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕುವೆಂಪು ವಿವಿ ರೆಡ್‌ಕ್ರಾಸ್ ಘಟಕದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಸ್.ಎಂ.ರವಿಂದ್ರ ಗೌಡ, ಕಾಲೇಜಿನ ಶೈಕ್ಷಣಿಕ ನಿರ್ದೇಶಕಿ ಡಾ. ಪ್ರೀತಿ ವಿ. ಶಾನುಭಾಗ್, ಮುಖ್ಯ ಶೈಕ್ಷಣಿಕ ನಿರ್ದೇಶಕ ಪ್ರೊ. ರಾಜೇಂದ್ರ ಚೆನ್ನಿ, ಆಡಳಿತಾಧಿಕಾರಿ ಪ್ರೊ. ರಾಮಚಂದ್ರ ಬಾಳಿಗ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸುಕೀರ್ತಿ, ಐಕ್ಯುಎಸಿ ಸಂಯೋಜಕಿ ಡಾ. ಅರ್ಚನಾ ಭಟ್, ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಮಂಜುನಾಥ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net