ಮುಂಜಾಗ್ರತೆಯಿಂದ ಸೈಬರ್​ ಅಪರಾಧ ತಡೆಯಬಹುದು; ಶಿವಶಂಕರ

17-RNR-06
Published on

ರಾಣೆಬೆನ್ನೂರ: ಇತ್ತೀಚಿನ ದಿನಗಳಲ್ಲಿ ಸೈಬರ್​ ಕೆಂ ಅಪರಾಧಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಮುಂಜಾಗ್ರತ ಕ್ರಮ ಕೈಗೊಳ್ಳುವುದರಿಂದ ಸೈಬರ್​ ಕೆಂ ಅಪರಾಧ ತಡೆಗಟ್ಟಬಹುದು ಎಂದು ಹಾವೇರಿ ಸೈಬರ್​ ಕೆಂ ಠಾಣೆ ಇನ್ಸಪೆಕ್ಟರ್​ ಶಿವಶಂಕರ ಗಣಾಚಾರಿ ಹೇಳಿದರು.

ನಗರದ ಹಲಗೇರಿ ರಸ್ತೆಯ ಬಿಎಜೆಎಸ್​ಎಸ್​ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸೈಬರ್​ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಕೊಡಿಸುವ ನೆಪದಲ್ಲಿ, ಸಾಲ ಕೊಡುವ ಮತ್ತು ಮದುವೆ ಮಾಡುವ ಉಡುಗೊರೆ ಕೊಡುವ ನೆಪದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಬಹಳಷ್ಟು ವಂಚನೆಗಳು ನಡೆಯುತ್ತಿದೆ. ವಾಟ್ಸ್​ಪ್​ ಗ್ರೂಪ್​ಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಬ್ಲಾ$್ಯಕ್​ ಮೇಲ್​ ಮಾಡಲಾಗುತ್ತಿದೆ. ಆದ್ದರಿಂದ ವಿದ್ಯಾಥಿರ್ಗಳು ಇದನ್ನು ಗಮನದಲ್ಲಿಟ್ಟುಕೊಂಡು ಜಾಗೃತರಾಗಿಬೇಕು. ಸೈಬರ್​ ವಂಚನೆಗೆ ಒಳಗಾದ ಕೂಡಲೇ ಹತ್ತಿರದ ಪೊಲೀಸ್​ ಠಾಣೆಗೆ ಸಂಪಕಿರ್ಸಬೇಕು. ಮಾಹಿತಿ ನೀಡಬೇಕು ಎಂದರು.

ಪ್ರಾಚಾರ್ಯ ಡಾ. ಸುರೇಶ ಬಣಕಾರ ಅಧ್ಯಕ್ಷತೆ ವಹಿಸಿದ್ದರು.

ಕಂಪ್ಯೂಟರ್​ ಸೈನ್ಸ್​ ವಿಭಾಗದ ಮುಖ್ಯಸ್ಥ ರಾಜೀವ ಕೆ.ಎಂ., ಬಿಇಡಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮೃತ್ಯುಂಜಯ ಎಂ.ಎಂ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net