ಸಹಕಾರ ಚಿಂತನೆ ಎಲ್ಲ ಕ್ಷೇತ್ರಕ್ಕೂ ಅಗತ್ಯ

skp sahakara
ಶಿಕಾರಿಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕ ಆರ್.ಎಂ.ಘಾಸಿ ಬರೆದ ಕೃತಿಯನ್ನು ಸಂಸದ ಬಿ.ವೈ.ರಾಘವೇಂದ್ರ ಬಿಡುಗಡೆಗೊಳಿಸಿದರು. ಲೋಕೇಶಪ್ಪ, ಮಂಜಪ್ಪ, ಪ್ರಕಾಶ್, ನಾಗೇಶ್, ಚಂದ್ರಶೇಖರ್, ರಾಜಶೇಖರ್ ಇತರರಿದ್ದರು.
Published on

ಶಿಕಾರಿಪುರ: ಸಹಕಾರ ಚಿಂತನೆಗಳು ಎಲ್ಲ ಕ್ಷೇತ್ರಗಳಲ್ಲಿಯೂ ಅಗತ್ಯವಿದೆ. ಇದರಿಂದ ಪರಸ್ಪರ ಅವಿನಾಭಾವ ಸಂಬಂಧ ಮೂಡುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಗುರವಾರ ಶಿಕ್ಷಕರ ಪತ್ತಿನ ಸಹಕಾರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕ ಆರ್.ಎಂ.ಘಾಸಿ ಬರೆದ ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಬದುಕಿನಲ್ಲಿಯೂ ಸಹಕಾರ ತತ್ವಗಳು ಹೊಸ ಆಯಾಮವನ್ನು ಹುಟ್ಟುಹಾಕುತ್ತವೆ. ಸಮಾನತೆ, ಸಹಬಾಳ್ವೆ ಸೃಜಿಸುವಂತೆ ಮಾಡುತ್ತವೆ ಎಂದರು.

ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ ಮಾಡುತ್ತಿರುವುದು ಒಳ್ಳೆಯ ವಿಚಾರ. ಸರ್ಕಾರ ಮತ್ತು ಅಭಿವೃದ್ಧಿ ನಡುವೆ ಸರ್ಕಾರಿ ನೌಕರರು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದರು.

ಆರ್ಥಿಕ ಕ್ಷೇತ್ರದಲ್ಲಿ ಸಹಕಾರ ಸಂಘಗಳ ಪಾತ್ರ ಪ್ರಮುಖ. ಶಿಕಾರಿಪುರ ತಾಲೂಕು ಹೆಚ್ಚು ಸಹಕಾರಿಗಳನ್ನು ಹೊಂದಿರುವ ನೆಲ. ಸಹಕಾರಿ ಧುರೀಣರು ಕ್ಷೇತ್ರವನ್ನು ಬೆಳೆಸಬೇಕು. ಇನ್ನಷ್ಟು ಸದೃಢಗೊಳಿಸಬೇಕು ಎಂದು ತಿಳಿಸಿದರು.

ಬಿಇಒ ಲೋಕೇಶಪ್ಪ ಮಾತನಾಡಿ, ಆರ್.ಎಂ.ಘಾಸಿ ಸಮಾಜಮುಖಿ ಚಿಂತನೆಯ ಶಿಕ್ಷಕ. ಅವರ ಆಡಳಿತದಲ್ಲಿ ಶಿಕ್ಷಕರ ಪತ್ತಿನ ಸಹಕಾರ ಸಂಘ ಸಂಪೂರ್ಣ ಡಿಜಿಟಲೀಕರಣ ಆಗಿದ್ದು ಹೆಚ್ಚಿನ ಯಶಸ್ಸು ಕಂಡಿದೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಡಿ.ಮಧುಕೇಶ್ವರ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಎಂ.ಘಾಸಿ, ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಂಜಪ್ಪ, ಕಾರ್ಯದರ್ಶಿಗಳಾದ ಎಂ.ಜಿ.ಪ್ರಕಾಶ್, ನಾಗೇಶ್, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ರಾಜಶೇಖರ್, ಉಮೇಶಪ್ಪ ಹುತ್ತೇಶ್, ಗದಿಗೆಪ್ಪ ಸಾಹುಕಾರ್, ದೇವರಾಜ್, ಸುಭಾಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net