

ರಾಣೆಬೆನ್ನೂರ: ತಾಲೂಕಿನ ಕೊಡಿಯಾಲ ಗ್ರಾಮದ ಶ್ರೀ ನಾಗಬನ ಮತ್ತು ಶ್ರೀ ಮೂಲದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮೇ 11 ಮತ್ತು 12ರಂದು ಷಷ್ಠ ವರ್ಧಂತಿ ಉತ್ಸವ, ಕುಂಭಮೇಳ ಜರುಗಲಿದೆ.
ಮೇ 11ರಂದು ಸಂಜೆ 4ಕ್ಕೆ ಗ್ರಾಮದ ಶ್ರೀ ದುಂಡಿ ಬಸವೇಶ್ವರ ದೇವಸ್ಥಾನದ ಬಳಿಯಿಂದ ಹೊರಡಲಿರುವ ಶ್ರೀ ದುರ್ಗಾದೇವಿಯ ಅಂಬಾರಿ ಉತ್ಸವ ಹಾಗೂ ಸುಮಂಗಲಿಯರ ರ್ಪೂಣ ಕುಂಭಮೇಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಮೂಲದುರ್ಗಾದೇವಿ ದೇವಸ್ಥಾನಕ್ಕೆ ಬಂದು ಸೇರಲಿದೆ.
ಮೇ 12ರಂದು ಬೆಳಗ್ಗೆ 8.30ರಿಂದ ನಿವಿರ್ಘ್ನ ಯಾಗ, ಪಂಚವಿಂಶತಿ ಕಲಶಾರಾಧನೆ, ಪ್ರಧಾನ ಯಾಗ, ಕುಂಭಾಭಿಷೇಕ, ಶ್ರೀ ದುರ್ಗಾ ಸಹಸ್ರನಾಮ ಕದಳಿ ಯಾಗ ಜರುಗುವುದು. ಸಂಜೆ 5ರಿಂದ ಶ್ರೀ ನಾಗದೇವರಿಗೆ ನಾಗ ತನು ತರ್ಪಣ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.