ಕೋಕೋನಟ್​ ಶೆಲ್​ ಚಾರಕೋಲ ಪುಡಿ ಬದಲು ಇದ್ದಿಲು ಕಳುಹಿಸಿ ವಂಚನೆ

Crime Logo
Published on

ಹಾವೇರಿ: ಕೋಕೋನಟ್​ ಶೆಲ್​ ಚಾರಕೋಲ (ಕೆಮಿಕಲ್​ ಪುಡಿ) ಬದಲು ಕಲ್ಲಿದ್ದಲು ಪುಡಿ ಕಳುಹಿಸಿ 14 ಲಕ್ಷ ರೂ. ವಂಚಿರುವ ಕುರಿತು ಇಲ್ಲಿಯ ಗ್ರಾಮೀಣ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ತಾಲೂಕಿನ ನೆಲೋಗಲ್ಲ ಗ್ರಾಮದ ವೀರಭದ್ರಪ್ಪ ಗೆದ್ಲೆಪ್ಪ ಕಾಳಪ್ಪನವರ ಎಂಬುವರಿಗೆ ಮೋಸ ಮಾಡಿರುವುದು. ಛತ್ತಿಸಗಡದ ದುರ್ಗ ಜಿಲ್ಲೆಯ ಬಿಲಾಯಿ ರಾಮದ ಸ್ವಪ್ನೆಲ್​ ಮಿಶ್ರಾ ಪಿನಾಕ ಕಾರ್ಬನ ಮೋಸ ಮಾಡಿರುವ ವ್ಯಕ್ತಿ.

ಈತ ವೀರಭದ್ರಪ್ಪ ಅವರಿಗೆ ಕೋಕೋನಟ್​ ಶೆಲ್​ ಚಾರಕೋಲ ಕಳುಹಿಸುವುದಾಗಿ ನಂಬಿಸಿ 14 ಲಕ್ಷ ರೂ. ಪಡೆದುಕೊಂಡಿದ್ದಾನೆ. ನಂತರ 33,790 ಕೆ.ಜಿ.ಯಷ್ಟು ಇದ್ದಿಲು ಪುಡಿ ಮತ್ತು ಕಲ್ಲಿದ್ದಲು ಪುಡಿ ಕೊಟ್ಟು ಮೋಸ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net