

ನವದೆಹಲಿ; ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಜಿರಳೆಗಳು ಪತ್ತೆಯಾಗಿದ ಹಿನ್ನೆಲೆ, ಪ್ರಯಾಣ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಬೇರೆ ಆಸನದ ವ್ಯವಸ್ಥೆ ಮಾಡಲಾಗಿದೆ.
ಸ್ಯಾನ್ ಫ್ರಾನ್ಸಿಸ್ಕೋದಿಂದ ಕೋಲ್ಕತ್ತಾ ಮೂಲಕ ಮುಂಬೈಗೆ ಕಾರ್ಯನಿರ್ವಹಿಸುವ ಏರ್ ಇಂಡಿಯಾ ವಿಮಾನ AI180 ನಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರು ಜಿರಳೆಗಳಿವೆ ಇದರಿಂದ ತಮಗೆ ತೊಂದರೆಯಾಗುತ್ತಿವೆ ಎಂದು ದೂರು ನೀಡಿದರು ನಂತರ ಅವರನ್ನು ಸ್ಥಳಾಂತರ ಮಾಡಲಾಯ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಕೋಲ್ಕತ್ತಾದಲ್ಲಿ ವಿಮಾನದ ಲೇಓವರ್ ಸಮಯದಲ್ಲಿ ವಿಮಾನದ ಸೀಟ್ಅನ್ನು ಸ್ವಚ್ಛಗೊಳಿಸಲಾಯಿತು ಎನ್ನಲಾಗಿದೆ.
ಕೋಲ್ಕತ್ತಾದಲ್ಲಿ ವಿಮಾನದ ನಿಗದಿತ ಇಂಧನ ನಿಲುಗಡೆಯ ಸಮಯದಲ್ಲಿ, ಸಮಸ್ಯೆಯನ್ನು ಪರಿಹರಿಸಲು ಅಲ್ಲಿನ ಸಿಬ್ಬಂದಿ ತಕ್ಷಣವೇ ಶುಚಿಗೊಳಿಸುವ ಪ್ರಕ್ರಿಯೆಯನ್ನು ನಡೆಸಿದರು ಮತ್ತು ಅದೇ ವಿಮಾನವು ನಂತರ ಮುಂಬೈಗೆ ಸಮಯಕ್ಕೆ ಸರಿಯಾಗಿ ಹೊರಟಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಇಂತಹ ಘಟನೆ ಮತ್ತೆ ಮರುಕಳಿಸದಿರುವಂತೆ ಏರ್ ಇಂಡಿಯಾ ನೋಡಿಕೊಳ್ಳುತ್ತದೆ ಎಂದು ವಿಮಾನ ಸಂಸ್ಥೆ ತಿಳಿಸಿದೆ. ಪ್ರಯಾಣಿಕರಿಗೆ ಉಂಟಾದ ಯಾವುದೇ ಅನಾನುಕೂಲತೆಗಾಗಿ" ಏರ್ ಇಂಡಿಯಾ ಗ್ರಾಹಕರಿಗೆ ಕ್ಷಮೆಯಾಚಿಸಿದೆ.
(ಏಜೆನ್ಸೀಸ್)