

ಬೆಂಗಳೂರು: ಪ್ರಾಣ ಪಣಕ್ಕಿಟ್ಟಿ ರೀಲ್ಸ್ ಮಾಡಿ ಬಹುಬೇಗ ಪ್ರಸಿದ್ಧಿಪಡೆಯಬೇಕು ಎನ್ನುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಹಾವಿ(Cobra)
ನ ಜೊತೆ ದೃಷ್ಟಿ ಕಾಳಗಕ್ಕಿಳಿದು ಕಣ್ಣಿಗೆ ಕಚ್ಚಿಸಿಕೊಂಡಿದ್ದಾನೆ, ಈ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೈರಲ್ ವೀಡಿಯೋದಲ್ಲಿರುವಂತೆ, ಹಾವು ಟೇಬಲ್ ಮೇಲೆ ಕುಳಿತು ಬುಸುಗುಡುತ್ತಿರುತ್ತದೆ. ಅದರ ಎದುರು ಕುರ್ಚಿಯಲ್ಲಿ ವ್ಯಕ್ತಿಯೊಬ್ಬ ಕುಳಿತಿರುತ್ತಾನೆ. ಪಕ್ಕದಲ್ಲಿ ಮತ್ತೊಬ್ಬ ಯುವಕ ಕುಳಿತು ಆ ವ್ಯಕ್ತಿ ಮತ್ತು ಹಾವಿನ ನಡುವೆ ಏನು ನಡೆಯುತ್ತಿದೆ ಎಂದು ಕುತೂಹಲದಿಂದ ನೋಡುತ್ತಿದ್ದಾನೆ. ಹಾವಿನ ಮುಂದೆ ಕುಳಿತ ವ್ಯಕ್ತಿ ನೇರವಾಗಿ ಅದರ ಕಣ್ಣುಗಳನ್ನು ತದೇಕಚಿತ್ತದಿಂದ ನೋಡುತ್ತಾನೆ.
ಹಾವು ಕೂಡ ಅವನನ್ನು ಗಮನಿಸುತ್ತದೆ. ಅವನು ಅದೇ ರೀತಿ ನೋಡುತ್ತ, ಹಾವಿನ ಹತ್ತಿರಕ್ಕೆ ಮುಖ ತರುತ್ತಾನೆ. ಅದರ ಕಣ್ಣುಗಳನ್ನು ನೋಡುತ್ತಾ ಏನೋ ಹೇಳುತ್ತಾನೆ. ಹತ್ತಿರ ಬರುತ್ತಿದ್ದಂತೆ ಹಾವಿಗೆ ಕೋಪ ಬರುತ್ತದೆ. ಯಾವುದೇ ವಿಳಂಬವಿಲ್ಲದೆ ಅವನ ಕಣ್ಣು ಕಚ್ಚುತ್ತದೆ. ಈ ಕಡಿತಕ್ಕೆ ಪಕ್ಕದಲ್ಲಿದ್ದ ಯುವಕ ಬೆಚ್ಚಿ ಬಿದ್ದಿದ್ದಾನೆ. ಇದರೊಂದಿಗೆ ಈ ವಿಡಿಯೋ ಮುಗಿಯುತ್ತದೆ.
ಈ ನಡುವೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ನೆಟಿಜನ್ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು, "ಹಾವುಗಳೊಂದಿಗೆ ಇಂತಹ ಆಟಗಳನ್ನು ಆಡುವುದು ಅಪಾಯಕಾರಿ" ಎಂದು ಹೇಳಿದರೆ, ಇನ್ನೂ ಕೆಲವರು "ಅವನು ತುಂಬಾ ಅನುಭವಿ, 42 ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾನೆ" ಎಂದು ಹೇಳಿದ್ದಾರೆ.
ಪ್ರಸ್ತುತ ಈ ವೀಡಿಯೊ ಪ್ರಸ್ತುತ 12 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 40.6 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.