ಗುಜರಾತ್‌ನ ಕೋಸ್ಟ್ ಗಾರ್ಡ್​​​ನಲ್ಲಿ ಹೆಲಿಕಾಪ್ಟರ್ ಪತನ; ಮೂವರು ಸಿಬ್ಬಂದಿ ಸಾವು | Gujarat

Untitled design - 2025-01-05T141958.462
Published on

ಗಾಂಧಿನಗರ: ಭಾರತೀಯ ಕೋಸ್ಟ್ ಗಾರ್ಡ್‌ನ ಎಎಲ್‌ಹೆಚ್ ಧ್ರುವ್ ಭಾನುವಾರ (ಜನವರಿ 5) ಗುಜರಾತ್‌ನ(Gujarat) ಪೋರಬಂದರ್​ನಲ್ಲಿ ಹಾರಾಟದ ವೇಳೆ ಅಪಘಾತಕ್ಕೀಡಾಗಿದೆ.

ಪೋರಬಂದರ್‌ನ ಕೋಸ್ಟ್ ಗಾರ್ಡ್ ಏರ್ ಎನ್‌ಕ್ಲೇವ್‌ನಲ್ಲಿ ಹೆಲಿಕಾಪ್ಟರ್ ಹಾರುತ್ತಿತ್ತು. ಹೆಲಿಕಾಪ್ಟರ್ ಟೇಕಾಫ್ ವೇಳೆ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಹಾರಾಟದ ಸಮಯದಲ್ಲಿ ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲಟ್‌ಗಳ ಜತೆಗೆ ಇತರ ಮೂವರು ಮಂದಿ ಇದ್ದರು. ಈ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.

ಈ ಹೆಲಿಕಾಪ್ಟರ್ ನಿತ್ಯದ ತರಬೇತಿಗಾಗಿ ಭಾನುವಾರ ಹಾರಾಟ ನಡೆಸುತ್ತಿತ್ತು. ಭಾರತೀಯ ಕೋಸ್ಟ್ ಗಾರ್ಡ್ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಪೋರ್ಟ್ ಬ್ಲೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೋಸ್ಟ್ ಗಾರ್ಡ್ ವಿಮಾನ ನಿಲ್ದಾಣದ ಬಳಿ 12:30ರ ಸುಮಾರಿಗೆ ಹೆಲಿಕಾಪ್ಟರ್ ಹಾರುತ್ತಿತ್ತು. ಈ ಸಮಯದಲ್ಲಿ ಏನೋ ತಪ್ಪಾಗಿ ಅದು ಕ್ರ್ಯಾಶ್ ಆಗಿದೆ. ಅಪಘಾತದ ನಂತರ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಮೂವರ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net