

ಯುಜೀನ್ (ಅಮೆರಿಕ): ಭಾರತದ ಬಸಂತ್ ಕುಮಾರ್ ಮೇವಾಲ್ ಮತ್ತು ಶಹನವಾಜ್ ಖಾನ್ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 19 ವರ್ಷದ ಬಸಂತ್ ಹೈಜಂಪ್ ಸ್ಪರ್ಧೆಯಲ್ಲಿ ಜಾಗತಿಕ ಮಟ್ಟದ ಪದಕ ಗೆದ್ದುಕೊಂಡ ಮೊದಲ ಭಾರತೀಯರೆನಿಸಿದ್ದಾರೆ. ಒಂದೇ ದಿನ ಅವಳಿ ಪದಕ ಗೆದ್ದುಕೊಂಡ ಭಾರತ, ಹಾಲಿ ಕೂಟದಲ್ಲಿ ಇದುವರೆಗೆ ಒಟ್ಟು 3 ಪದಕ ಜಯಿಸಿದಂತಾಗಿದೆ.
ಶನಿವಾರ ನಡೆದ ಪುರುಷರ ಹೈಜಂಪ್ ಸ್ಪರ್ಧೆಯ ಫೈನಲ್ನಲ್ಲಿ ಬಸಂತ್ ವೈಯಕ್ತಿಕ ಶ್ರೇಷ್ಠ 2.21 ಮೀ. ಎತ್ತರ ಜಿಗಿದು ರಜತ ಪದಕಕ್ಕೆ ಕೊರಳೊಡ್ಡಿದರು. ಭಾರತೀಯ ನಾಕೌಸೇನೆಯ ಅವರು ಪಾಕ್ ಗಡಿಯಲ್ಲಿರುವ ರಾಜಸ್ಥಾನದ ಅನುಪ್ಗಢದವರಾಗಿದ್ದಾರೆ. ಅಲ್ಜೀರಿಯಾದ ಯೂನಸ್ ಅಯಾಚಿ ಚಿನ್ನ ಮತ್ತು ಬ್ರಿಟನ್ನ ಒಟಿಸ್ ಪೂಲ್ ಕಂಚು ಗೆದ್ದರು. ಪದಕ ವಿಜೇತ ಮೂವರೂ 2.21 ಮೀ. ಜಿಗಿದರು. ಮತ್ತು 2.24 ಮೀ. ಹಾರುವ ಮೂರೂ ಪ್ರಯತ್ನದಲ್ಲಿ ವಿಲರಾದರು. ಬಳಿಕ ಹಿಂದಿನ ಜಿಗಿತ ಪೂರ್ಣಗೊಳಿಸಲು ತೆಗೆದುಕೊಂಡ ಪ್ರಯತ್ನಗಳ ಆಧಾರದಲ್ಲಿ ಪದಕ ವಿಜೇತರ ಸ್ಥಾನ ನಿರ್ಧರಿಸಲಾಯಿತು. ಅಯಾಚಿ ಮೊದಲ ಯತ್ನದಲ್ಲೇ 2.21 ಮೀ. ಜಿಗಿದಿದ್ದರೆ, ಬಸಂತ್ 2 ಮತ್ತು ಪೂಲ್ 3ನೇ ಯತ್ನದಲ್ಲಿ ಈ ಎತ್ತರವನ್ನು ಯಶಸ್ವಿಯಾಗಿ ಹಾರಿದ್ದರು. ಕಿರಿಯರ ಅಥ್ಲೆಟಿಕ್ಸ್ನಲ್ಲಿ ಭಾರತ ಈ ಹಿಂದೆ ಅನೇಕ ಪದಕ ಗೆದ್ದಿದ್ದರೂ, ಹೈಜಂಪ್ನಲ್ಲಿ ಪದಕ ಒಲಿದಿದ್ದು ಇದೇ ಮೊದಲಾಗಿದೆ.
ಕನ್ನಡತಿ ಸಹನಾ ನೆರವು!
Sahana Kumari
) ನೆರವಾಗಿದ್ದಾರೆ. ಬಸಂತ್ ಹಾಲಿ ಋತುವಿನಲ್ಲಿ ಸಹನಾ ಮಾರ್ಗದರ್ಶನದಲ್ಲಿ 10 ಸೆಂಟಿ ಮೀಟರ್ನಷ್ಟು ಪ್ರಗತಿ ಸಾಧಿಸಿದ್ದು, 2.11ರಿಂದ 2.21 ಮೀ.ಗೆ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯನ್ನು ಸುಧಾರಿಸಿಕೊಂಡಿದ್ದಾರೆ.