ಕಥೋಲಿಕ್ ಧರ್ಮಾಧ್ಯಕ್ಷರ ನಿಯೋಗದಿಂದ ಸಿಎಂ ಭೇಟಿ

Catholic
Published on

ಬೆಂಗಳೂರು: ಕರ್ನಾಟಕ ಪ್ರಾಂತೀಯ ಕಥೋಲಿಕ್ ಧರ್ಮಾಧ್ಯಕ್ಷರ ಮಂಡಳಿ ಅಧ್ಯಕ್ಷ ಡಾ.ಪೀಟರ್ ಮಚಾದೊ ಅವರ ನೇತೃತ್ವದ ಧರ್ಮಾಧ್ಯಕ್ಷರ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಭಿನಂದಿಸಿತು. ಇದೇ ಸಂದರ್ಭದಲ್ಲಿ ಕಥೋಲಿಕ್ ಸಮುದಾಯದ ಹಲವು ಶೈಕ್ಷಣಿಕ ಮತ್ತು ಸಾಮಾಜಿಕ ಬೇಡಿಕೆಗಳನ್ನು ಸಿಎಂ ಮುಂದಿಟ್ಟಿತು.

ನಿಯೋಗದಲ್ಲಿ ಧರ್ಮಾಧ್ಯಕ್ಷರಾದ ಡಾ.ಚಿರಾಲ್ಡ್ ಐಸಾಕ್ ಲೋಬೋ, ಡಾ.ಗೀವರ್ಗೀಸ್ ಮಕಾರಿಯೋಸ್, ಡಾ.ಪೀಟರ್ ಪೌಲ್ ಸಲ್ಡಾನಾ, ಡಾ.ಡೆರಿಕ್ ಫೆರ್ನಾಂಡೀಸ್, ಡಾ.ರಾಬರ್ಟ್ ಮಿರಾಂಡ, ಡಾ.ಫ್ರಾನ್ಸಿಸ್ ಸೆರಾವೋ, ಡಾ.ಜೋಸ್ೆ ಅರುಮಚಡತ್, ಡಾ.ಫ್ರಾನ್ಸಿಸ್ ಸೆರಾವೊ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net