

Delhi Flyover : ದೆಹಲಿ ಮುಖ್ಯಮಂತ್ರಿ ರೇಖಾಗುಪ್ತ ಬೆಂಗಾವಲು ಪಡೆ ಕಾರಿಗೆ ದೆಹಲಿಯ ಹೈದಾಪುರ್ ಫ್ಲೈಓವರ್ನಲ್ಲಿ ಡಜನ್ಗಟ್ಟಲೇ ಬೀದಿ ದನಗಳು ಅಡ್ಡದಿಡ್ಡಿ ಬಂದಿದ್ದರಿಂದ, ಸಿಎಂ ರೇಖಾ ಕಾರಿನಿಂದ ಕೆಳಗಿಳಿದು ದಾರಿ ತಪ್ಪಿದ ದನಗಳಿಗೆ ಆಶ್ರಯ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫ್ಲೈಓವರ್ ಮೇಲೆ ಏಕಾಏಕಿ ಬಂದ ಬೀದಿದನಗಳನ್ನು ನೋಡಿ ಚಾಲಕ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿದ್ದರಿಂದ ಅಪಘಾತ ತಪ್ಪಿದೆ ಎಂದು ಪ್ರತ್ಯಕ್ಷ್ಯದರ್ಶಿ ಹೇಳಿದ್ದಾರೆ ಎಂದು ಐಎಸ್ಎನ್ಎಸ್ ವರದಿ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಸಿಎಂ ರೇಖಾ ಗುಪ್ತ ಬೀದಿ ದನಗಳ ಬಗ್ಗೆ ವಿಚಾರಿಸುತ್ತಿರುವುದನ್ನು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡುವುತ್ತಿರುವುದು ಕಾಣುತ್ತಿದೆ.
ಇತ್ತೀಚಿಗಷ್ಟೆ ದೆಹಲಿಯ ಅತಿದೊಡ್ಡ 1 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ ಒಂದು ದಿನದ ಬಳಿಕ ಸಿಎಂ ರೇಖಾಗುಪ್ತ ವಿವಿಧ ಕಾರ್ಯಕ್ರಮಗಳಿಗೆ ಪ್ರವಾಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.(ಏಜೆನ್ಸೀಸ್)