ಭಾರತ ಮಾತೆ ಚಿತ್ರ ವಿರುದ್ಧ ಸಿಎಂ ಪಿಣರಾಯಿ ಪತ್ರ

7-6862d02dc3462
Published on

ತಿರುವನಂತಪುರಂ: ಕೇರಳ ರಾಜ್ಯಪಾಲ ರಾಜೇಂದ್ರ ಅರ್ಳೆಕರ್ ಅಧಿಕೃತ ಸಮಾರಂಭಗಳಲ್ಲಿ ಆರ್​ಎಸ್​ಎಸ್ ಧ್ವಜದೊಂದಿಗೆ ‘ಭಾರತ ಮಾತೆ’ ಚಿತ್ರಗಳನ್ನು ಬಳಸುವುದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅರ್ಳೆಕರ್​ರಿಗೆ ಪತ್ರ ಬರೆದಿರುವ ವಿಜಯನ್, ‘ಭಾರತ ಮಾತೆ’ ಚಿತ್ರ ಅಸಾಂವಿಧಾನಿಕವಾದುದು ಎಂದು ವರ್ಣಿಸಿದ್ದಾರೆ. ಇದೇ ವಿಚಾರದಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದ ಸಚಿವ ಶಿವನ್ ಕುಟ್ಟಿ ರಾಜಭವನದಲ್ಲಿ ನಡೆದ ಸಮಾರಂಭವೊಂದನ್ನು ಕೆಲ ದಿನಗಳ ಹಿಂದೆ ಬಹಿಷ್ಕರಿಸಿದ್ದರು. ಸಂವಿಧಾನಕ್ಕೆ ಅನುಗುಣವಾಗಿರದ ಚಿತ್ರಗಳನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಬಳಸುವುದಕ್ಕೆ ಸಚಿವ ಸಂಪುಟ ಅಸಮಾಧಾನ ವ್ಯಕ್ತಪಡಿಸಿದೆ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ವಿಜಯನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net