ಅರ್ಧ ತಾಸಲ್ಲೇ ಮುಗೀತು ಸಂಸದರ ಜತೆಗೆ ಸಿಎಂ ಸಭೆ; ಇದ್ದಿದ್ದೂ ಅರ್ಧಕ್ಕರ್ಧದಷ್ಟು ಸದಸ್ಯರು!

BSY
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸಂಜೆ ಕರೆದಿದ್ದ ಪಕ್ಷದ ಸಂಸದರ ಸಭೆಯು ಅರ್ಧ ತಾಸಿನಲ್ಲಿ ಮುಗಿದಿದ್ದು, ಅನೌಪಚಾರಿಕ ಚರ್ಚೆಗೆ ಸೀಮಿತವಾಯಿತು. ಒಟ್ಟು ಸಂಸದರಲ್ಲಿ ಅರ್ಧಕ್ಕಿಂತ ಕಡಿಮೆ ಸಂಸದರಷ್ಟೇ ಪಾಲ್ಗೊಂಡಿದ್ದರು.


ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ, ಲೋಕಸಭೆ ಸದಸ್ಯರಾದ‌ ಜಿ.ಎಸ್.ಬಸವರಾಜ, ಎ.ನಾರಾಯಣಸ್ವಾಮಿ, ‌ಬಿ.ವೈ.ರಾಘವೇಂದ್ರ, ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ರಾಜಾ ಅಮರೇಶ್ವರ ನಾಯಕ, ಪಿ.ಸಿ.ಗದ್ದಿಗೌಡರ್, ಶಿವಕುಮಾರ್ ಉದಾಸಿ, ಉಮೇಶ್ ಜಾಧವ್, ಪ್ರತಾಪ ಸಿಂಹ ಮಾತ್ರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net