ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನಲೆ ಸಿಎಂ ಮಾರೇಗೌಡ ಬಿಜೆಪಿಯಿಂದ ಉಚ್ಚಾಟನೆ!

Untitled design (13)
Published on

ಬೆಂಗಳೂರು: ಎಸ್.ಟಿ. ಸೋಮಶೇಖರ್ ಅವರ ಸೋಲಿಗೆ ಪ್ರಯತ್ನಿಸಿದ್ದರು ಎಂಬ ಆರೋಪದ ಹಿನ್ನಲೆ ಇದೀಗ ಸಿಎಂ ಮಾರೇಗೌಡ ಅವರನ್ನು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಆದೇಶದ‌ ಮೇರೇಗೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ರಾಜ್ಯ ಬಿಜೆಪಿ ಶಿಸ್ತು ಸಮಿತಿ ಆದೇಶದ‌ ಮೇರೆಗೆ ಬಿಜೆಪಿ ಬೆಂಗಳೂರು ಉತ್ತರ ಅಧ್ಯಕ್ಷರಿಂದ ಉಚ್ಚಾಟನೆಗೊಳಿಸಲಾಗಿದೆ. ಕಳೆದ‌ ವಿಧಾಸಭೆ ಚುನಾವಣೆ‌ಯಲ್ಲಿ ಎಸ್.ಟಿ. ಸೋಮಶೇಖರ್​ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನಲೆ, ಪಕ್ಷದ ಶಿಸ್ತು ಉಲ್ಲಂಘನೆ ಎಂದು ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷ ಉಚ್ಚಾಟನೆ ಮಾಡಲಾಗಿದೆ.

ಉಚ್ಚಾಟನೆ ಮಾಡಿರುವ ಬಗ್ಗೆ ಪತ್ರದಲ್ಲಿ ಈ ರೀತಿ ಉಲ್ಲೇಖಗೊಂಡಿದೆ, "ರಾಜ್ಯ ಶಿಸ್ತುಸಮಿತಿಯ ಆದೇಶದಂತೆ ನೀವು 2023 ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರದ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ, ಪಕ್ಷವಿರೋಧಿ ಚಟುವಟಿಕೆ ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಇದರಿಂದ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ ಎಂದು ಪರಿಗಣಿಸಿ, ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ" ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net