ಇದೇ ನೋಡಿ ನಮ್ಮ Someಕಲ್ಪ: ಸಿಎಂ ಯಡಿಯೂರಪ್ಪ ಅವರದ್ದೇನಿರಬಹುದಪ್ಪಾ..!

BSY 1 jan 20
Published on

ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.

ಯಡಿಯೂರಪ್ಪ

ಹೇಗಾದರೂ ಮಾಡಿ ಸಿಎಂ ಕುರ್ಚಿ ಹಿಡಿಯಬೇಕೆಂಬ ಕಳೆದ ವರ್ಷದ ಸಂಕಲ್ಪ ಈಡೇರಿದೆ. ಅದನ್ನು ಕಳೆದುಕೊಳ್ಳಬಾರದು ಅನ್ನುವುದೇ ಹೊಸ ವರ್ಷದ ಸಂಕಲ್ಪ. ಅದಕ್ಕಾಗಿ ಇನ್ನಷ್ಟು ಆಪರೇಷನ್ ಮಾಡಲು ತೆರೆಮರೆಯ ಸಿದ್ಧತೆಗಳು ನಡೆಯುತ್ತಿವೆ. ಮಹಾರಾಷ್ಟ್ರದಲ್ಲಿ ನಾವು ಅಧಿಕಾರ ಕಳೆದುಕೊಂಡಿರುವುದರಿಂದ ಈ ಬಾರಿ ಮುಂಬೈಗೆ ಅತೃಪ್ತರನ್ನು ಕಳಿಸುವಂತಿಲ್ಲ. ಹೀಗಾಗಿ ವಿಧಾನಸೌಧದಲ್ಲೆ ಒಂದು ಆಪರೇಷನ್ ಥಿಯೇಟರ್ ಮಾಡುವ ಯೋಚನೆ ಇದೆ. ಜೊತೆಗೆ ಒಂದು ಸಿನಿಮಾ ನಿರ್ವಿುಸುವ ಯೋಜನೆಯೂ ಉಂಟು. ಹಲವು ಸಲ ವಿಫಲವಾದರೂ ಛಲ ಬಿಡದೆ ಆಪರೇಷನ್ ಕಮಲ ಮಾಡಿ ಸಿಎಂ ಹೇಗೆ ಆದೆ ಅನ್ನುವ ಕುರಿತು ನಾಗಾಭರಣ ಅವರ ನಿರ್ದೇಶನದಲ್ಲಿ ‘ಮರಳಿ ಯತ್ನವ ಮಾಡು’ ಎನ್ನುವ ಸಾಕ್ಷ್ಯಚಿತ್ರ ನಿರ್ವಿುಸಿ ದೇವೇಂದ್ರ ಫಡ್ನವೀಸ್ ಅವರಿಗೆ ಕಳುಹಿಸುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net