LIVE| ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ 1 ವರ್ಷದ ಸಾಧನೆಯ ಸಮಾರಂಭ

BSY BJP
Published on

ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನ ವರ್ಚುವಲ್ ವೇದಿಕೆಯಲ್ಲಿ ಬೆಳಗ್ಗೆ 11ಗಂಟೆಗೆ ಚಾಲನೆ ಪಡೆದಿರುವ ಬಿಜೆಪಿ ಸರ್ಕಾರದ 1 ವರ್ಷದ ಸಾಧನೆಯ ಸಮಾರಂಭದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ನೇರ ಪ್ರಸಾರದ ಮೂಲಕ ಭಾಗಿಯಾಗಿದ್ದಾರೆ.

ಬ್ಯಾಂಕ್ವೆಟ್ ಸಭಾಂಗಣವನ್ನು ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ್ದು, ವೇದಿಕೆಯ ಮೇಲೆ ಸಿಎಂ ಬಿಎಸ್ ವೈ ಒಬ್ಬರೇ ಆಸೀನರಾಗಿದ್ದಾರೆ. ಸಭಾಂಗಣದಲ್ಲಿ ಸಾಮಾಜಿಕ ಅಂತರ ಪಾಲನೆ ಕಾಯ್ದುಕೊಂಡು ವಿಶೇಷ ಆಹ್ವಾನಿತರಿಗೆ ಕುರ್ಚಿಗಳ ವ್ಯವಸ್ಥೆ ಮಾಡಿದ್ದು, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಸಿಎಂ ಬಿಎಸ್ ವೈ ಪುತ್ರ ಬಿ.ವೈ.ವಿಜಯೇಂದ್ರ ಅರ್ಧ ತಾಸು ಮೊದಲೇ ಆಗಮಿಸಿ ಆಹ್ವಾನಿತ ಗಣ್ಯರೊಂದಿಗೆ ಕುಶಲೋಪರಿ ನಡೆಸಿ, ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಕಾರ್ಯಕ್ರಮದ ಮುಖ್ಯಾಂಶಗಳು

• ಬೆಳಗ್ಗೆ 11.15 ದೀಪ ಬೆಳಗಿಸುವುದರ ಮೂಲಕ ಸಮಾರಂಭಕ್ಜೆ ಸಾಂಪ್ರದಾಯಿಕ ಚಾಲನೆ

• 11.25 ಪುಸ್ತಕಗಳ ಬಿಡುಗಡೆ, 1) ಸಿಎಂ ಅವರಿಂದ 1 ವರ್ಷದ ಸಾಧನೆಯ ಕಿರು ಹೊತ್ತಗೆ ಬಿಡುಗಡೆ ( ಅದೇ ಸಮಯಕ್ಕೆ ಜಿಲ್ಲಾ ಕೇಂದ್ರದಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆ ಮಾಡುವರು.

2) ಪುಟಕಿಟ್ಟ ಚಿನ್ನ- ಕಿರು ಹೊತ್ತಗೆ ಸಿಎಂ ಅವರಿಂದ ಬಿಡುಗಡೆ.

3) ಜನಪದ

4) ಮಾರ್ಚ್ ಆಫ್ ಕರ್ನಾಟಕ

• 11.35 ಐದು ನಿಮಿಷಗಳ ಸಾಕ್ಷ್ಯಚಿತ್ರ ಪ್ರಸಾರ ( ಏಕ ಕಾಲದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಪ್ರಸಾರವಾಗಲಿದೆ)

• 11.40 ಆಯ್ದ ಜಿಲ್ಲೆಗಳ ಒಟ್ಟು 10 ಮಂದಿ ಫಲಾನುಭವಿಗಳೊಂದಿಗೆ ಸಿಎಂ ನೇರ ಸಂವಾದ

ಮಧ್ಯಾಹ್ನ 12 ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ರಾಮನಗರದಿಂದ ತಮ್ಮ ಆಶಯ ನುಡಿಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬಾಗಲಕೋಟೆಯಿಂದ ಪ್ರಸ್ತುತಪಡಿಸುವರು.

12.15 ಮುಖ್ಯಮಂತ್ರಿ ಬಿಎಸ್ ವೈ ಪ್ರಧಾನ ಭಾಷಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net