

ಅರಸೀಕೆರೆ: ಜನಾಕ್ರೋಶದ ಹಿನ್ನಲೆಯಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಭಾಗದಲ್ಲಿನ ದ್ವಿಚಕ್ರ ವಾಹನ ಪಾಕಿರ್ಂಗ್ ಜಾಗವನ್ನು ತೆರವುಗೊಳಿಸಲಾಗಿದೆ.
ಅತ್ಯಂತ ಕಿರಿದಾದ ನಿಲ್ದಾಣದಲ್ಲಿ ಬಸ್‌ಗಳ ನಿಲುಗಡೆಗೆ ತೊಂದರೆ ಎದುರಾಗಿತ್ತು. ಇದ್ಯಾವುದನ್ನೂ ಪರಿಗಣಿಸದ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿಯವರಿಗೆ ವಾಹನ ನಿಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ನಾಗರಿಕರು, ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಹೋರಾಟದ ಹಾದಿ ಹಿಡಿಯುವ ಮುನ್ಸೂಚನೆ ಕೊಟ್ಟಿದ್ದರು. ಸ್ಥಳ ಪರಿಶೀಲನೆ ನಡೆಸಿದ ಉನ್ನತಾಧಿಕಾರಿಗಳು ಟೆಂಡರ್ ರದ್ದು ಮಾಡಿದ್ದರಿಂದ ಪಾಕಿರ್ಂಗ್ ಜಾಗದಲ್ಲಿ ಹಾಕಲಾಗಿದ್ದ ತಗಡಿನ ಶೀಟ್, ಕಬ್ಬಿಣದ ಸರಳುಗಳನ್ನು ತೆಗೆದು ಹಾಕಲಾಗಿದೆ.
ಅಲ್ಲದೆ ಬೈಕ್ ಸೇರಿದಂತೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಿ 500 ರೂ. ದಂಡ ವಿಧಿಸುವ ನಾಮಫಲಕ ಅಳವಡಿಸಲಾಗಿದೆ. ‘ಬಸ್ ನಿಲ್ದಾಣ ದ್ವಿಚಕ್ರ ವಾಹನ ನಿಲುಗಡೆ ತಾಣ’ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆ ಮಾ.29ರಂದು ಸಮಸ್ಯೆ ಗಂಭೀರತೆಯನ್ನು ಸಚಿತ್ರ ಸಹಿತ ವಿಶೇಷ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಸಾರಿಗೆ ಅಧಿಕಾರಿಗಳು ಪಾಕಿರ್ಂಗ್ ಜಾಗ ತೆರವು ಮಾಡಿಸಿ ಬಸ್ ಚಾಲಕರು ಹಾಗೂ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.