ಆರೋಗ್ಯಕರ ಜೀವನಕ್ಕೆ ಸ್ವಚ್ಛತೆ ಮುಖ್ಯ

sharamadana tarikere
ತರೀಕೆರೆ 18ನೇ ವಾರ್ಡ್ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಶ್ರಮದಾನಕ್ಕೆ ಡಿಸಿ ಮೀನಾ ನಾಗರಾಜ್ ಚಾಲನೆ ನೀಡಿದರು. ಜಿ.ಎಚ್.ಶ್ರೀನಿವಾಸ್, ಶಿವಕುಮಾರ್, ಡಾ. ಕೆ.ಜೆ.ಕಾಂತರಾಜ್, ವಿ.ಎಸ್.ರಾಜೀವ್, ಪರಮೇಶ ಇತರರಿದ್ದರು.
Published on

ತರೀಕೆರೆ: ಪುರಸಭೆಯು ಶ್ರಮದಾನದ ಮೂಲಕ ಸ್ವಚ್ಛತೆಗಾಗಿ ತನಗಿರುವ ಬದ್ಧತೆ ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದು ಡಿಸಿ ಮೀನಾ ನಾಗರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ವೋದಯದ ಹಿನ್ನೆಲೆಯಲ್ಲಿ ಪಟ್ಟಣದ 18ನೇ ವಾರ್ಡ್‌ನ ಉದ್ಯಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿ, ನಾನಾ ಕಾರಣಗಳಿಂದ ಪರಿಸರ ಕಲುಷಿತಗೊಳ್ಳುತ್ತಿದೆ. ಆರೋಗ್ಯಯುತ ಜೀವನಕ್ಕಾಗಿ ಸುತ್ತಮುತ್ತಲ ವಾತಾವರಣ ಸ್ವಚ್ಛತೆಯಿಂದ ಕೂಡಿರಬೇಕು ಎಂದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಆದರ್ಶ ಸಾರ್ವಕಾಲಿಕ. ಹುತಾತ್ಮರ ಸ್ಮರಣೆ ಮೂಲಕ ದೇಶ ಕಟ್ಟುವ ಕೆಲಸವಾಗಬೇಕಿದೆ. ಗಿರಿನಗರ ಉದ್ಯಾನ ಅಭಿವೃದ್ಧಿಗೆ ಶೀಘ್ರ 5 ಲಕ್ಷ ರೂ. ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಪರಮೇಶ ಮಾತನಾಡಿ, ಪುರಸಭೆ ಕಸ ವಿಲೇವಾರಿಯಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತಿದೆ. ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸಿ ಪಟ್ಟಣದ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪರಿಸರ ಇಂಜಿನಿಯರ್ ತಾಹೀರಾ ತಸ್ನೀಮ್ ಮಾತನಾಡಿ, ಸೂಕ್ತ ಅವಕಾಶವಿರುವ ಉದ್ಯಾನಗಳಲ್ಲಿ ಪಾರ್ಕ್ ಕಾಂಪೋಸ್ಟ್ ಆರಂಭಿಸಲು ಪ್ರಯತ್ನಿಸಲಾಗುವುದು ಎಂದರು. ಜೆಎಂಎ್ಸಿ ನ್ಯಾಯಾಧೀಶ ಶಿವಕುಮಾರ್, ಎಸಿ ಡಾ. ಕೆ.ಜೆ.ಕಾಂತರಾಜ್, ತಹಸೀಲ್ದಾರ್ ವಿ.ಎಸ್.ರಾಜೀವ್, ಪುರಸಭೆ ಸದಸ್ಯರಾದ ಟಿ.ದಾದಾಪೀರ್, ಟಿ.ಎಂ.ಭೋಜರಾಜ್, ಮುಖ್ಯಾಧಿಕಾರಿ ಎಚ್.ಪ್ರಶಾಂತ್, ವಕೀಲ ಎಸ್.ಸುರೇಶ್‌ಚಂದ್ರ, ಗಿರಿನಗರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಪ್ರಭುಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net