

ಕಾರ್ಕಳ: ಗಾಂಧಿ ಜಯಂತಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಜಾರ್ಕಳದಿಂದ ಕುಕ್ಕುಂದೂರು ಪಿಲಿಚಂಡಿ ಸ್ಥಾನದ ವರೆಗೆ ಕಾರ್ಕಳ ಜ್ಞಾನಸುಧಾದ ಎನ್ನೆಸ್ಸೆಸ್ ಹಾಗೂ ಎನ್.ಸಿ.ಸಿ ವಿದಾರ್ಥಿಗಳಿಂದ ಸ್ವಚ್ಛತಾ ಅಭಿಯಾನ ಬುಧವಾರ ಜರುಗಿತು.
ಕುಕ್ಕುಂದೂರಿನ ಉದ್ಯಮಿ ತ್ರಿವಿಕ್ರಮ ಕಿಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಮಾಹಿತಿ ನೀಡಿದರು. ಮುಖ್ಯ ಅಥಿತಿಗಳಾಗಿ ಕುಕ್ಕುಂದೂರು ಪಂಚಾಯಿತಿ ಸದಸ್ಯ ರೆಹಮತುಲ್ಲಾ ಹಾಗೂ ಉದ್ಯಮಿ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಪ್ರಾಂಶುಪಾಲ ದಿನೇಶ್ ಎಂ.ಕೊಡವೂರು, ಉಪಪ್ರಾಂಶುಪಾಲ ಸಾಹಿತ್ಯ, ಶಾಲಾ ವಿಭಾಗದ ಉಪ ಪ್ರಾಂಶುಪಾಲ ವಾಣಿ ಕೆ., ಹಾಗೂ ಅಧಿಕಾರಿಗಳು ಉಪಸ್ತಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ದರ್ಶಿನಿ ಕಾರ್ಯಕ್ರಮ ನಿರ್ವಹಿಸಿದರು.