ಬಿಜೆಪಿಯಿಂದ ಸ್ವಚ್ಛತಾ ಅಭಿಯಾನ

2sgr7
ಗಾಂಧಿ ಜಯಂತಿ ಅಂಗವಾಗಿ ಸಾಗರದ ಗಣಪತಿ ಕೆರೆ ದಂಡೆಯಲ್ಲಿ ಬಿಜೆಪಿಯಿಂದ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
Published on

ಸಾಗರ: ಮಹಾತ್ಮ ಗಾಂಧಿ ಅವರ ಗ್ರಾಮ ರಾಜ್ಯ, ಸ್ವಚ್ಛ ಭಾರತ ಪರಿಕಲ್ಪನೆಗೆ ವಿಶೇಷ ಒತ್ತು ನೀಡಿದವರು ಪ್ರಧಾನಿ ನರೇಂದ್ರ ಮೋದಿ. ಅಧಿಕಾರ ಸ್ವೀಕರಿಸಿದ ನಂತರ ಸ್ವಚ್ಛ ಭಾರತ್ ಅಭಿಯಾನಕ್ಕೆ ಆದ್ಯತೆ ದೊರೆಯಿತು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

ಸಾಗರದ ಗಣಪತಿ ಕೆರೆ ದಂಡೆಯಲ್ಲಿ ಬಿಜೆಪಿಯಿಂದ ಸೇವಾ ಪ್ರಾಕ್ಷಿಕ ಹಾಗೂ ಗಾಂಧಿ ಜಯಂತಿ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿಯಾನದಿಂದ ಜನರಲ್ಲಿ ಜಾಗೃತಿ ಮೂಡಿತು. ಬಯಲುಮುಕ್ತ ಶೌಚ ಶೇ. 90ರಷ್ಟು ಯಶಸ್ವಿಯಾಗಿದೆ ಎಂದು ತಿಳಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ, ನಗರ ಮಂಡಲ ಅಧ್ಯಕ್ಷ ಗಣೇಶ್‌ಪ್ರಸಾದ್, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಮಲ್ಲಿಕಾರ್ಜುನ ಹಕ್ರೆ, ಕೊಟ್ರಪ್ಪ, ಹರೀಶ್, ಶ್ರೀನಿವಾಸ್ ಮೇಸ್ತಿ, ಸಂತೋಷ್ ಶೇಟ್, ಮೈತ್ರಿ ಪಾಟೀಲ್, ಸತೀಶ್ ಬಾಬು, ಸಂತೋಷ್, ಸವಿತಾ ವಾಸು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net