

ಬೆಂಗಳೂರು: ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಮತ್ತೆ ಕ್ಲಾಟ್ 2020 ಪರೀಕ್ಷೆಯನ್ನು ಮುಂದೂಡಿದ್ದು, ದೇಶಾದ್ಯಂತ ಪರೀಕ್ಷೆಯನ್ನು ಆಗಸ್ಟ್ 22, 2020 ರಂದು ನಡೆಯಲಿದೆ.
ಜುಲೈ 10 ರವರೆಗೆ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಕ್ಲಾಟ್ನ ಅಧಿಕೃತ ಸೈಟ್ ಮೂಲಕ consortiumofnlus.ac.in ನಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಕ್ಲಾಟ್ ಪರೀಕ್ಷೆ ದೇಶದಾದ್ಯಂತ 203 ಸ್ಥಳಗಳಲ್ಲಿ ನಡೆಯಲಿದೆ. ಪರೀಕ್ಷೆಗೆ ಹಾಜರಾಗಲಿಚ್ಛಿಸುವ ವಿದ್ಯಾರ್ಥಿಗಳು COVID-19ನ ಈ ಸಮಯದಲ್ಲಿ ಪ್ರಯಾಣದ ಅವಶ್ಯಕತೆಗಳನ್ನು ಕಡಿಮೆ ಮಾಡಲು ಹತ್ತಿರದ ಕೇಂದ್ರವನ್ನು ಆಯ್ಕೆ ಮಾಡಬಹುದು. ಈ ಮೊದಲು ಆಫ್ಲೈನ್ ಪರೀಕ್ಷೆಗಾಗಿ 67 ಸ್ಥಳಗಳಲ್ಲಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿತ್ತು.
ಪರೀಕ್ಷೆಯಲ್ಲಿ 150 ವಸ್ತುನಿಷ್ಠ ಮಾದರಿ ಪ್ರಶ್ನೆಗಳಿರುತ್ತವೆ. ಇಂಗ್ಲಿಷ್ ಭಾಷೆ, ಸಾಮಾನ್ಯ ಜ್ಞಾನ, ಲೀಗಲ್ ರೀಸನಿಂಗ್, ಲಾಜಿಕಲ್ ರೀಸನಿಂಗ್, ಕ್ವಾಂಟಿಟೇಟಿವ್ ರೀಸನಿಂಗ್, ಪ್ರಚಲಿತ ವಿದ್ಯಮಾನಗಳ ಮೇಲೆ ಪ್ರಶ್ನೆಗಳಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. CLAT ನ ಅಧಿಕೃತ ಸೈಟ್ನಿಂದ ಅಭ್ಯರ್ಥಿಗಳು ಹೆಚ್ಚಿನ ಸಂಬಂಧಿತ ವಿವರಗಳನ್ನು ಪರಿಶೀಲಿಸಬಹುದು. ‘