

Navi Mumbai: ವಾಟ್ಸ್ಆ್ಯಪ್ ಗ್ರೂಪ್ ಚಾಟ್ನಲ್ಲಿ ಮರಾಠಿಯಲ್ಲಿ ಉತ್ತರಿಸಲು ಕೇಳಿದ 20 ವರ್ಷದ ವಿದ್ಯಾರ್ಥಿಯ ಮೇಲೆ ಆತನ ಸಹಪಾಠಿಗಳೇ ಹಲ್ಲೆ ಮಾಡಿರುವ ಘಟನೆ ನವಿ ಮುಂಬೈನ ಐ.ಸಿ.ಎಲ್.ಇ.ಎಸ್. ಮೋತಿಲಾಲ್ ಜುಂಜುನ್ವಾಲಾ ಕಾಲೇಜಿನ ಹೊರಭಾಗದಲ್ಲಿ ಇತ್ತೀಚೆಗೆ ನಡೆದಿದೆ.
ಗಾಯಾಳು ಸೂರಜ್ ವಿತ್ತಲ್ ಪವಾರ್ ಮೂರನೇ ವರ್ಷದ ಬಿಎಸ್ಸ್ಸಿ ವಿದ್ಯಾರ್ಥಿ. ದಾಳಿಯ ನೇತೃತ್ವವನ್ನು ಆತನ ಸಹಪಾಠಿ ಫೈಜಾನ್ ನಾಯಕ್ ವಹಿಸಿದ್ದನು ಎಂದು ತಿಳಿದುಬಂದಿದೆ. ಈ ವೇಳೆ ತಮ್ಮ ತರಗತಿಯ ಎಸ್ವೈಐಟಿ ಹೆಸರಿನ ವಾಟ್ಸಾಪ್ ಗ್ರೂಪ್ನಲ್ಲಿ ಮರಾಠಿ ಬಳಕೆಯ ಬಗ್ಗೆ ಪವಾರ್ ಜೊತೆ ವಾಗ್ವಾದ ನಡೆಸಿದ್ದರಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪವಾರ್, ಗುಂಪಿನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದಾಗ ಇಬ್ಬರ ನಡುವೆ ವಿವಾದ ಪ್ರಾರಂಭವಾಗಿದೆ. ಅದಕ್ಕೆ ಫೈಜಾನ್ ಹಿಂದಿಯಲ್ಲಿ ಪ್ರತಿಕ್ರಿಯಿಸಿದ್ದಾನೆ. ಈ ವೇಳೆ ಪವಾರ್, ಮರಾಠಿಯಲ್ಲಿ ಮಾತನಾಡಬೇಕು, ಇಲ್ಲದಿದ್ದರೆ ಎಂಎನ್ಎಸ್ ನಿಮ್ಮ ಹಿಂದೆ ಬರುತ್ತದೆ ಎಂದು ತಮಾಷೆ ಮಾಡಿದ್ದರಿಂದ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ.
ಮರುದಿನ ನಾಯ್ಕ್ ಮತ್ತು ಮೂವರು ಅಪರಿಚಿತ ವ್ಯಕ್ತಿಗಳು ಕಾಲೇಜಿನ ಹೊರಗೆ ಪವಾರ್ನ್ನು ಅಡ್ಡ ಹಾಕಿ, "ನಾನು ಮರಾಠಿಯಲ್ಲಿ ಏಕೆ ಮಾತನಾಡಬೇಕು?" ಎಂದು ಪ್ರಶ್ನಿಸಿ, ಸೂರಜ್ ಮೇಲೆ ಹಾಕಿ ಸ್ಟಿಕ್ನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನು ಪವಾರ್, ನವಿ ಮುಂಬೈನ ಮುನ್ಸಿಪಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೊದಲ ನನ್ನಷ್ಟಕ್ಕೆ ನಾನು ಸುಮ್ಮನಿದ್ದೆ. ಯಾವಾಗ ಬೆದರಿಕೆ ಕರೆಗಳು ಬರಲು ಆರಂಭವಾಯಿತೋ ಅದೇ ಆತಂಕದಿಂದ ನಡೆದ ಘಟನೆಯನ್ನು ಪೊಲೀಸರಿಗೆ ತಿಳಿಸಿ, ಅಧಿಕೃತವಾಗಿ ಕೇಸು ದಾಖಲಿಸಿದ್ದಾನೆ ಎಂದು ಹೇಳಿದ್ದಾರೆ.
ಬೆದರಿಕೆ ಹಾಗೂ ಹಲ್ಲೆಗೆ ಸಂಬಂಧಿಸಿದ ಕಾಯ್ದೆ ಅಡಿಯಲ್ಲಿ ವಿದ್ಯಾರ್ಥಿಗಳ ಮೇಲೆ ವಾಶಿ ಪೊಲೀಸರು ಎಫ್ಐಆರ್ ದಾಖಲಿಸಿ, ಇತರ ಮೂವರು ಆರೋಪಿಗಳ ಗುರುತುಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)