

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರಿಂದ ವಿಮಾನದೊಳಗೆ ಅಚಾತುರ್ಯ ಸಂಭವಿಸಿತ್ತು. ಯಾವುದೇ ಅನುಮತಿ ಇಲ್ಲದೆ ತುರ್ತು ನಿರ್ಗಮನ ಬಾಗಿಲನ್ನು ತೆರೆದಿದ್ದಾರೆ ಎಂದು ಸಂಸದರ ವಿರುದ್ಧ ಆರೋಪಿಸಲಾಗಿತ್ತು.
ಸಂಸದ ತೇಜಸ್ವಿ ಸೂರ್ಯ ಕಳೆದ ಡಿಸೆಂಬರ್ 10 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಆದರೆ ಇದ್ಯಾವುದರ ಬಗ್ಗೆಯೂ ಮಾಹಿತಿ ಹೊರಬಿಟ್ಟುಕೊಡದ ಇಂಡಿಗೋ ವಿಮಾನ ಸಂಸ್ಥೆಯ ವಿರುದ್ಧು ಸಹ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯನ್ನು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಡಿಜಿಸಿಎ ಇದನ್ನು ದೃಢಪಡಿಸಿತ್ತು.
ವಿಮಾನಯಾನ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಸಂಸದ ತೇಜಸ್ವಿ ಸೂರ್ಯ ಅವರಲ್ಲಿ ಕ್ಷಮೆಯಾಚಿಸಲು ಕೋರಲಾಗಿದ್ದು, ಲಿಖಿತವಾಗಿ ಪತ್ರವನ್ನು ಇಂಡಿಯೋ ವಿಮಾನ ಸಂಸ್ಥೆ ಮೂಲಗಳು ತಿಳಿಸಿರುವುದು ವರದಿಯಾಗಿತ್ತು.
ಇದೀಗ ಈ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದು, ಈ ವಿಷಯದ ಬಗ್ಗೆ ಈಗಾಗಲೇ ಏರ್ಲೈನ್ಸ್, ಡಿಜಿಸಿಎ ಸ್ಪಷ್ಟನೆ ನೀಡಿದೆ. ನನ್ನ ಜೊತೆ ಪ್ಯಾಸೆಂಜರ್ ಆಗಿದ್ದ ಅಣ್ಣಾಮಲೈ ಹಾಗೂ ಇನ್ಮಿಬ್ಬರು ಪ್ರಯಾಣಿಕರು ಇದ್ದರು. ಈ ಬಗ್ಗೆ ಕಾಂಗ್ರೆಸ್‌ನವರು, ಇನ್ಯಾರೋ ಪ್ರಶ್ನಿಸಿದರು ಅಂತ ಪದೇ ಪದೇ ಉತ್ತರಿಸಿ ಸಮಯ ವ್ಯರ್ಥ ಮಾಡುವುದಿಲ್ಲ. ಈಗಾಗಲೇ ಈ ವಿಚಾರವಾಗಿ ಸ್ಪಷ್ಟೀಕರಣ ಕೊಡಲಾಗಿದೆ ಎಂದು ಹೇಳಿದ್ದಾರೆ.
ತೇಜಸ್ವಿ ಸೂರ್ಯ ಅವರ ಅಚಾತುರ್ಯವನ್ನು ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿತ್ತು. ಆಟ ಆಡುವ ಮಕ್ಕಳಿಗೆ ಯಜಮಾನಿಕೆ ಕೊಟ್ಟರೆ ಏನಾಗಲಿದೆ ಎಂಬ ಮಾತಿಗೆ ತೇಜಸ್ವಿ ಸೂರ್ಯ ನಿದರ್ಶನವಾಗಿದ್ದಾರೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದೇಕೆ ಎಂದು ಪ್ರಶ್ನಿಸಿತ್ತು. ಅಲ್ಲದೆ ದೋಸೆ ತಿನ್ನುವ ಚಪಲ ಹೆಚ್ಚಾಗಿ “ಎಮರ್ಜೆನ್ಸಿ ಎಕ್ಸಿಟ್” ಅಗಲು ತೇಜಸ್ವಿ ಸೂರ್ಯ ಹೊರಟಿದ್ದರೇ ಎಂದು ಕಾಲೆಳೆದಿತ್ತು.