ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ವೀರೇಶ ಅಧಿಕಾರ ಸ್ವೀಕಾರ

12-RNR-04
Published on
ರಾಣೆಬೆನ್ನೂರ: ನಗರವು ಜಿಲ್ಲೆಯಲ್ಲಿಯೆ ಅತಿ ದೊಡ್ಡದಾಗಿದ್ದು ಸ್ಥಳಿಯ ಜನರಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ವ್ಯವಸ್ಥಿತ ರೀತಿಯಲ್ಲಿ ಲೇ ಔಟ್​ ನಿಮಾರ್ಣಕ್ಕೆ ಒತ್ತು ನೀಡಲಾಗುವುದು ಎಂದು ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ವೀರೇಶ ಮೋಟಗಿ ಹೇಳಿದರು.

ಸ್ಥಳಿಯ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅವರು, ನಗರದ ದೊಡ್ಡಕೆರೆ ಅಭಿವೃದ್ಧಿಪಡಿಸಿ ಅದರಲ್ಲಿ ಬೋಟಿಂಗ್​ ವ್ಯವಸ್ಥೆ ಕಲ್ಪಿಸಿ ಅದನ್ನು ಪ್ರವಾಸಿ ತಾಣವಾಗಿಸುವ ಚಿಂತನೆಯಿದೆ. 1971ರಲ್ಲಿ ಪಾಕಿಸ್ತಾನದ ಜತೆ ನಡೆದ ಯುದ್ಧದಲ್ಲಿ ಕಾರ್ಯನಿರ್ವಹಿಸಿದ (ಸದ್ಯ ಪುಣೆಯಲ್ಲಿರುವ) ಸೇನಾ ಟ್ಯಾಂಕರ್​ನ್ನು ನಗರದ ಪ್ರಮುಖ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗುವುದು. ನಗರದಲ್ಲಿರುವ 400 ಪಾರ್ಕ್​ಗಳನ್ನು ಅಭಿವೃದ್ಧಿಪಡಿಸಿ ಅವುಗಳ ನಿರ್ವಹಣೆಯನ್ನು ಸಾರ್ವಜನಿಕರ ಸುಪದಿರ್ಗೆ ವಹಿಸಲು ಯೋಚಿಸಲಾಗುತ್ತಿದೆ ಎಂದರು. ನಗರ ಯೋಜನಾ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಗುರುನಾಥ ಕಂಬಳಿ, ಬಸವರಾಜ ಕಡೇಮನಿ, ನೂರಜಹಾನ ನಂದ್ಯಾಲ, ಸದಸ್ಯ ಕಾರ್ಯದಶಿರ್ ರವಿಕಿರಣ, ಹಾವೇಮುಲ ಅಧ್ಯಕ್ಷ ಮಂಜನಗೌಡ ಪಾಟೀಲ, ಗಂಗಾಧರ ಬಣಕಾರ, ಪ್ರೊ. ಬಿ.ಬಿ.ನಂದ್ಯಾಲ, ಪ್ರಭುಗೌಡ ಪಾಟೀಲ, ಕೆ. ಶಿವಲಿಂಗಪ್ಪ, ಎಸ್​.ಎಸ್​. ರಾಮಲಿಂಗಣ್ಣನವರ, ಜಿ.ಜಿ.ಹೊಟ್ಟಿಗೌಡ್ರ, ವಿ.ಎಫ್​. ಮರಬಸಣ್ಣನವರ, ಚಂದ್ರಕಲಾ ಬಿಷ್ಟಣ್ಣನವರ, ಇರ್ಫಾನ ದಿಡಗೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net