ನಗರದಲ್ಲಿ ಬಿದ್ದಿರುವ ತಗ್ಗು-ಗುಂಡಿಗಳನ್ನು ಮುಚ್ಚಲು ಆಗ್ರಹ

27-RNR-09
Published on

ರಾಣೆಬೆನ್ನೂರ: ನಗರದಲ್ಲಿನ ತೆಗ್ಗು ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಸಾರ್ವಜನಿಕರು ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಪ್ರಮುಖ ನಗರವಾಗಿದ್ದು ವಿವಿಧ ಧಾಮಿರ್ಕ ಕೇಂದ್ರಗಳಿಗೆ ತೆರಳಲು ಮಧ್ಯವತಿರ್ ಸ್ಥಳವಾಗಿದ್ದರೂ ಇಲ್ಲಿನ ರಸ್ತೆಗಳ ಸ್ಥಿತಿಗತಿ ಮಾತ್ರ ಅಯೋಮಯವಾಗಿದೆ. ನಗರದ ಕುರುಬಗೇರಿ ಕ್ರಾಸ್​ನಿಂದ ಸೊಪ್ಪಿನಪೇಟೆ ಮಾರ್ಗವಾಗಿ ಹಾದುಹೋಗುವ ಬೆನಕನಕೊಂಡ ಬೈಪಾಸ್​ ಹಾಗೂ ಹಲಗೇರಿ ಬೈಪಾಸ್​ವರೆಗೆ ತುಂಬಾ ಹಾಳಾಗಿರುವ ಡಾಂಬರ್​ ರಸ್ತೆಯನ್ನು ತೆಗೆದು ಕಾಂಕ್ರೀಟ್​ ರಸ್ತೆಯನ್ನು ಮಾಡಬೇಕು.

ಹಳೆಯ ತರಕಾರಿ ಮಾರುಕಟ್ಟೆ ಕೆಸರಿನ ಗದ್ದೆಯಾಗಿದ್ದು ಅಲ್ಲಿನ ಸಾರ್ವಜನಿಕರು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಇದಲ್ಲದೆ ವಿವಿಧ ವಾರ್ಡ್​ಗಳಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ಇದರಿಂದ ಜನರು ಅನಾರೋಗ್ಯದಿಂದ ಬಳಲುತ್ತಿದ್ದು, ಹಿರಿಯ ನಾಗರಿಕರು ರಸ್ತೆ ಮಾರ್ಗವಾಗಿ ಹೋಗುತ್ತಿರುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತ ಪರಿಸ್ಥಿತಿ ನಿಮಾರ್ಣವಾಗಿದೆ.

ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಹೋಗುವಾಗ ಗುಂಡಿಗಳಿಂದ ನೀರು ತುಂಬಿದ್ದಲ್ಲಿ ಎಷ್ಟೋ ಜನರು ಬಿದ್ದು ಕೈ ಕಾಲುಗಳನ್ನು ಮುರಿದುಕೊಳ್ಳುತ್ತಿದ್ದಾರೆ. ಆದ್ದರಿಂದ ನಗರಸಭೆ ಅಧಿಕಾರಿಗಳು ತಗ್ಗು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಒಂದು ವಾರದೊಳಗೆ ತಾವು ಕ್ರಮ ಕೈಗೊಳ್ಳದೆ ಹೋದಲ್ಲಿ ಪ್ರಜ್ಞಾವಂತ ನಾಗರೀಕರಿಂದ ತಮ್ಮ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.

ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಸದೃಢ ಕರ್ನಾಟಕ ನಿಮಾರ್ಣ ವೇದಿಕೆಯ ಮಂಜುನಾಥ ಗುಡ್ಡಣ್ಣನವರ, ರಾಜೇಶ ಅಂಗಡಿ, ಮಂಜುನಾಥ ಗುಡ್ಡಣ್ಣನವರ, ಮಂಜುನಾಥ ಸಂಭೋಜಿ, ಮಾಲತೇಶ ಮಡಿವಾಳರ, ಶೈಲಕ್ಕ ಹರನಗಿರಿ, ಯಲ್ಲಪ್ಪ ಚಿಕ್ಕಣ್ಣನವರ, ನಿಂಗಪ್ಪ ಜಾಲಗಾರ, ಸಿದ್ದಪ್ಪ ದೇವರಗುಡ್ಡ, ಚಂದ್ರಶೇಖರ ಐರಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net