ಕೇಂದ್ರ ಸರ್ಕಾರ ಶಾಂತಿಯುತ ರಾಷ್ಟ್ರದಲ್ಲಿ ಅಶಾಂತಿಯ ಬೀಜ ಬಿತ್ತುತ್ತಿದೆ: ಮಾಜಿ ಶಾಸಕ ಆರೋಪ

Protst 4 jan 2020
Published on

ವಿಜಯಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಕಾವು ಇನ್ನೂ ಆರಿಲ್ಲ. ಇಂದು ಮುದ್ದೇಬಿಹಾಳದಲ್ಲಿ ಸಿಎಎ ಹಾಗೂ ಎನ್​ಆರ್​ಸಿ ವಿರೋಧಿಸಿ ಮುಸ್ಲಿಂ ಹಾಗೂ ದಲಿತಪರ ಸಂಘಟನೆಗಳು ಬೃಹತ್​ ಪ್ರತಿಭಟನೆ ನಡೆಸಿವೆ.

ಮುದ್ದೇಬಿಹಾಳದ ಕಿಲ್ಲಾದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿದ್ದು ಪ್ರತಿಭಟನಾಕಾರರು ಪ್ರಧಾನಿ ಮೋದಿ ಹಾಗೂ ಆರ್​ಎಸ್​ಎಸ್​ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸಾಗಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶ ಒಡೆಯುವ ಉದ್ದೇಶ ಹೊಂದಿದೆಯೇ? ರಕ್ತಪಾತದ ಇಚ್ಛೆ ನಿಮಗೆ ಇದೆಯೇ? ಶಾಂತಿಯುತ ರಾಷ್ಟ್ರದಲ್ಲಿ ಅಶಾಂತಿಯ ಬೀಜ ಬಿತ್ತುತ್ತಿದ್ದೀರಿ ಎಂದು ಮಾಜಿ ಶಾಸಕ ಸಿ.ಎಸ್​.ನಾಡಗೌಡ ಅಪ್ಪಾಜಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಲ್ಲದೆ, ಮತಬ್ಯಾಂಕ್​ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net