

ಪ್ರವಾದಿ ಮುಹಮ್ಮದ್(ಸ)ಅವರು ಹಜ್ರತ್ ಮುಆದ್(ರ) ಅವರನ್ನು ಯುಮನ್ನ ರಾಜ್ಯಪಾಲರನ್ನಾಗಿ ಕಳುಹಿಸುತ್ತಾರೆ. ಆಗ ಅವರೊಡನೆ, ‘ಮರ್ದಿತನ ಮೊರೆಯಿಂದ ಸುರಕ್ಷಿತವಾಗಿರಿ. ಅವನು ಹಾಗೂ ಅಲ್ಲಾಹನ ನಡುವೆ ಯಾವ ಅಡ್ಡಿಯೂ ಇರುವುದಿಲ್ಲ’. ಜನತೆಯ ಹಕ್ಕುಗಳನ್ನು ಕಾಪಾಡುವುದು ಹಾಗೂ ನ್ಯಾಯವನ್ನು ಸ್ಥಾಪಿಸುವುದು ಆಳುವವರ, ಸರ್ಕಾರದ ಮೂಲಭೂತ ಕರ್ತವ್ಯ. ಆದರೆ ಅಧಿಕಾರ ಎಂತಹ ಮಾದಕ ವಸ್ತುವೆಂದರೆ, ಕೆಲವೊಮ್ಮೆ ಸ್ವತಃ ಆಡಳಿತಗಾರರೇ ಪ್ರಜೆಗಳಿಗೆ ಅನ್ಯಾಯ ಮಾಡುವುದುಂಟು. ಜಗತ್ತಿನಲ್ಲಿ ಇದಕ್ಕೆ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಆದ್ದರಿಂದಲೇ ಪ್ರವಾದಿವ ರ್ಯರು(ಸ) ಹಜ್ರತ್ ಮುಆದ್(ರ) ಅವರಿಗೆ, ಯಾರದೇ ಹಕ್ಕು ಚ್ಯುತಿ ಆಗದಂತೆ, ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಆದೇಶಿಸಿದರು.
ಈ ಸಂದರ್ಭದಲ್ಲಿ ಪ್ರವಾದಿವರ್ಯರು(ಸ) ಬಳಸಿದ ಶಬ್ದಗಳು ಪರಿಣಾಮಕಾರಿಯಾಗಿವೆ. ಅವರ ಮಾತಿನ ಒಟ್ಟು ಅರ್ಥವೇನೆಂದರೆ ಶೋಷಣೆಗೊಳಗಾದವನ, ಅನ್ಯಾಯಕ್ಕೀಡಾದವನಮೊರೆಯು ನೇರವಾಗಿ ಅಲ್ಲಾಹ (ದೇವರು)ನನ್ನು ತಲುಪುತ್ತದೆ.ಆದ್ದರಿಂದ ಅಲ್ಲಾಹನಿಗೆ ಭಯಪಟ್ಟು ಶೋಷಣೆ, ಅಕ್ರಮ, ಅನ್ಯಾಯದ ವರ್ತನೆಗಳಿಂದ ದೂರವಿರಬೇಕು ಎಂಬುದು ಅವರ ಅಭಿಪ್ರಾಯವಾಗಿದೆ. ಈ ಹದೀಸ್(ವಚನ)ಇಸ್ಲಾಂ ಎಂತಹ ಆಡಳಿತಗಾರರನ್ನು ಮುಂದೆ ತರಲು ಬಯಸುತ್ತಿತ್ತು ಎಂಬುದನ್ನು ವ್ಯಕ್ತಪಡಿಸುತ್ತದೆ. ಮತ್ತೊಂದು ಸಂದರ್ಭದಲ್ಲಿ ಪ್ರವಾದಿ(ಸ) ಹೀಗೆ ಹೇಳಿದರು: ‘ಯಾರಾದರೂ ಒಪ್ಪಂದ ಮಾಡಿ ಕೊಂಡ ಮುಸ್ಲಿಂಯೇತರನ ಹತ್ಯೆ ಮಾಡಿದರೆ, ಆತ ನಲವತ್ತು ವರ್ಷ ಪ್ರಯಾಣ ಮಾಡಿ ಹೋಗಬೇಕಾದಷ್ಟು ದೂರದವರೆಗೂ ಹರಡುವಂತಹ ಸ್ವರ್ಗದ ಸುವಾಸನೆಯನ್ನು ಕೂಡ ಅನುಭವಿಸಲಾರನು’.
ಅಂದರೆ ಸ್ವರ್ಗದಿಂದ ಆತ ಅಷ್ಟೊಂದು ದೂರವಾಗುತ್ತಾನೆ. ಪ್ರವಾದಿಯವರು(ಸ) ತಮ್ಮ ಒಬ್ಬ ಸ್ನೇಹಿತನ ಹೆಗಲ ಮೇಲೆ ಕೈಯಿಟ್ಟು ಒಮ್ಮೆ ಹೀಗೆ ನುಡಿದರು: ‘ಈ ಜಗತ್ತಿನಲ್ಲಿ ನೀವು ವಿದೇಶೀಯರಂತೆ, ಒಬ್ಬ ಪ್ರಯಾಣಿಕನಂತೆ ಬದುಕಿರಿ’ ಎಂದು ಹೇಳಿದರು. ಅದೇನು? ಮುಂದಿನವಾರ.