

ಬೆಂಗಳೂರು: ಪ್ರತಿವಾರವೂ ಭಾರತೀಯ ಚಿತ್ರರಂಗ ಸೇರಿದಂತೆ ಹಾಲಿವುಡ್ನ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಮನರಂಜಿಸುತ್ತದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳ ಸ್ಟಾರ್ ನಟರ ಫಿಲಂಗಳು ತೆರೆಕಂಡು ಚಿತ್ರಪ್ರೇಮಿಗಳಿಂದ ವ್ಯಾಪಕ ಮೆಚ್ಚುಗೆ ಗಳಿಸಿ, ಬಾಕ್ಸ್ ಆಫೀಸ್ ಲೂಟಿ ಮಾಡುತ್ತದೆ. ಆದ್ರೆ, ಕೆಲವು ಚಿತ್ರಗಳು ನಿರೀಕ್ಷೆಯನ್ನು ತಲುಪದೆ, ಫ್ಲಾಪ್ ಸಾಲಿಗೆ ಸೇರುತ್ತದೆ.
ಜನವರಿ 14ರ ಸಂಕ್ರಾಂತಿ ಹಬ್ಬದಂದು ಟಾಲಿವುಡ್ ಹಾಗೂ ಇತರೆ ಚಿತ್ರರಂಗದಿಂದ ಹಲವಾರು ಸಿನಿಮಾಗಳು ಚಿತ್ರಮಂದಿರಗಳಲ್ಲಿ ತೆರೆಕಂಡು ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳ ಸಾಲಿಗೆ ಸೇರ್ಪಡೆಗೊಂಡಿತು. ಎಂದಿನಂತೆ ಥಿಯೇಟರ್ನಲ್ಲಿ ರಿಲೀಸ್ ಆದ ಬಳಿಕ ಒಟಿಟಿಯಲ್ಲಿ ಬಿಡುಗಡೆಗೊಳ್ಳುವಂತೆ ಈ ಸಿನಿಮಾಗಳು ಈ ವಾರ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಲಗ್ಗೆಯಿಟ್ಟಿದೆ. ಹಾಗಾದ್ರೆ, ಯಾವೆಲ್ಲಾ ಫಿಲಂಗಳು ರಿಲೀಸ್ ಆಗಿವೆ ಎಂಬುದರ ವಿವರ ಈ ಕೆಳಕಂಡಂತಿದೆ.
ಈ ವಾರ ಒಟಿಟಿ ಪ್ರವೇಶಿಸಿದ ಚಿತ್ರಗಳ ಪಟ್ಟಿ:
ಗುಂಟೂರು ಕಾರಂ - ನೆಟ್‌ಫ್ಲಿಕ್ಸ್
ಕ್ಯಾಪ್ಟನ್ ಮಿಲ್ಲರ್ - ಅಮೆಜಾನ್ ಪ್ರೈಮ್ ವಿಡಿಯೋ
ಅಯಾಲನ್ - ಸನ್ ನೆಕ್ಸ್ಟ್
ಬಬಲ್ಗಮ್ - ಆಹಾ
ಪಿಂಡಮ್ - ಅಮೆಜಾನ್ ಪ್ರೈಮ್ ವಿಡಿಯೋ
ಕಾಟೇರಾ - ಜೀ 5
ಖಿಚಿಡಿ 2 – ಜೀ 5
ದಿ ಮಾರ್ವೆಲ್ಸ್ - ಡಿಸ್ನಿ ಹಾಟ್‌ಸ್ಟಾರ್
ಆರ್ಯ ಸೀಸನ್ 3 - ಡಿಸ್ನಿ ಹಾಟ್‌ಸ್ಟಾರ್
ಲ್ಯಾಂಟ್ ರಾಣಿ - ಜೀ 5,(ಏಜೆನ್ಸೀಸ್).