

ಬೆಂಗಳೂರು: ದಕ್ಷಿಣ ಭಾರತದಲ್ಲಿ ಹತ್ತೊಂಬತ್ತನೇ ಶತಮಾನದ ಶಿಕ್ಷಣತಜ್ಞ ಮತ್ತು ಸಮಾಜ ಸುಧಾರಕರಾದ ಸೇಂಟ್ ಕುರಿಯಾಕೋಸ್ ಎಲಿಯಾಸ್ ಚವರ ಅವರ ಶೈಕ್ಷಣಿಕ ದೃಷ್ಟಿಕೋನದ ಕನಸಿನ ಕೂಸು ಕ್ರೈಸ್ಟ್(ವಿಶ್ವವಿದ್ಯಾಲಯ)(Christ University). ಸೇಂಟ್ ಕುರಿಯಾಕೋಸ್ ಅವರು 1831ರಲ್ಲಿ ಸ್ಥಾಪಿಸಲಾದ ಕ್ಯಾಥೋಲಿಕ್ ಕೂಟವಾದ ಕಾರ್ಮೆಲೈಟ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (CMI) ತನ್ನ ಆಡಳಿತ ಮಂಡಳಿಯಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ನಡೆಸುತ್ತಿದೆ.
1969ರಲ್ಲಿ ವಿಸ್ತರಣೆಗೊಂಡ ಈ ಯೂನಿವರ್ಸಿಟಿಯೂ ಟೀಚಿಂಗ್, ರೀಸರ್ಚ್ ಆ್ಯಂಡ್ ಸರ್ವೀಸ್ ಜತೆಗೆ ಆರ್ಕಿಟೆಕ್ಚರ್, ಕಲೆ ಮತ್ತು ಹ್ಯೂಮ್ಯಾನಿಟಿಸ್, ಬ್ಯುಸೆನೆಸ್ ಆ್ಯಂಡ್ ಮೆನೆಜ್ಮೆಂಟ್, ಕಾಮರ್ಸ್ ಆ್ಯಂಡ್ ಫಿನ್ಯಾನ್ಸ್, ಎಜ್ಯುಕೇಷನ್, ಇಂಜಿನಿಯರಿಂಗ್, ಲಾ, ಸೈನ್ಸ್ ಆ್ಯಂಡ್ ಸೋಷಿಯಲ್ ಸೈನ್ಸ್ ವಿಭಾಗಗಳಲ್ಲಿ 30,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿಯನ್ನು ನೀಡಿದೆ.
ಕರ್ನಾಟಕದ ಬೆಂಗಳೂರಿನ ನಾಲ್ಕು ಕ್ಯಾಂಪಸ್‌ಗಳು, ಲಾವಾಸಾ-ಪುಣೆ ಮಹಾರಾಷ್ಟ್ರ, ಗಾಜಿಯಾಬಾದ್, ರಾಷ್ಟ್ರೀಯ ರಾಜಧಾನಿ ದೆಹಲಿ (ಎನ್‌ಸಿಆರ್) ಪ್ರದೇಶನಲ್ಲಿರುವ ಕ್ಯಾಂಪಸ್‌ಗಳು ಹೀಗೆ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಜತೆಗೆ 60ಕ್ಕೂ ಹೆಚ್ಚು ದೇಶಗಳಿಗೂ ಹೊಂದಿಕೊಳ್ಳುವಂತೆ ಬಹುಸಂಸ್ಕೃತಿಗೆ ಈ ಕ್ರೈಸ್ಟ್ ವಿಶ್ವವಿದ್ಯಾಲಯ ಸಾಕ್ಷಿಯಾಗಿದೆ.
ಕ್ರೈಸ್ಟ್ ಅಲುಮ್ನಿ ಫೌಂಡೇಶನ್ ಬೆಂಗಳೂರು, ನ್ಯೂಯಾರ್ಕ್ ನಗರದಲ್ಲಿ ಮೊದಲ ಸಾಗರೋತ್ತರ ಅಲುಮ್ನಿ ಅಧ್ಯಯನವನ್ನು ಶನಿವಾರ (ನವೆಂಬರ್ 9) ಬೆಳಗ್ಗೆ 11 ಗಂಟೆಗೆ(EST-Eastern Standard Time) ಆರಂಭಿಸುವುದಾಗಿ ತಿಳಿಸಿದೆ. 862 ಮ್ಯಾನ್ಹ್ಯಾಟನ್ ಏವ್, ಬ್ರೂಕ್ಲಿನ್ NY 11222 ನಲ್ಲಿನ ಡಾ.ಫಾ. ಸೇಂಟ್ ಆಂಥೋನಿ ಚರ್ಚ್ನಲ್ಲಿ ಅಮೆರಿಕ ಮತ್ತು ಕೆನಡಾದ ಅಲುಮ್ನಿ ಕೂಟವನ್ನು ಆಯೋಜಿಸಿದೆ.
ಅಮೆರಿಕಾದಲ್ಲಿ ಇದನ್ನು ಆರಂಭಿಸುವ ಮುಖ್ಯ ಉದ್ದೇಶ ಹಾಲಿ ಮತ್ತು ಭವಿಷ್ಯದ ವಿದ್ಯಾರ್ಥಿಗಳಿಗೆ ಸಹಕಾರ ನೀಡುವುದಾಗಿದೆ. ಜತೆಗೆ ಹಳೆಯ ವಿದ್ಯಾರ್ಥಿಗಳ ಸಂಪರ್ಕಗಳನ್ನು ಬಲಪಡಿಸುವುದು, ವಿದ್ಯಾರ್ಥಿಗಳು ಮತ್ತು ಇತ್ತೀಚಿನ ಪದವೀಧರರನ್ನು ಬೆಂಬಲಿಸುವುದು, ಶೈಕ್ಷಣಿಕ ಮತ್ತು ವೃತ್ತಿಪರ ಅಭಿವೃದ್ಧಿಯನ್ನು ಉತ್ತೇಜಿಸುವುದು, ಜಾಗತಿಕ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು, ಫಂಡ್ ರೈಸಿಂಗ್ ಮತ್ತು ಸ್ಕಾಲರ್ಶಿಪ್,ಭವಿಷ್ಯದ ಯೋಜನೆಗಳು ಮೆಂಟರ್‌ಶಿಪ್ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು, ಅಮೆರಿಕ ಮತ್ತು ಕೆನಡಾದ ವಿವಿಧ ಭಾಗಗಳಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಭೇಟಿ ಮಾಡುವುದು, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳನ್ನು ಬೆಂಬಲಿಸುವುದು, ವೃತ್ತಿ ಸಹಾಯ, ನೆಟ್‌ವರ್ಕಿಂಗ್, ಸಂಶೋಧನೆ ಮತ್ತು ಇಂಟರ್ನ್‌ಶಿಪ್ ಪಾಲುದಾರಿಕೆಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ಕೋರ್ ಕಮಿಟಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಖಜಾಂಜಿ ಜತೆಗೆ ಸದಸ್ಯರು ಈ ಉಪಕ್ರಮದ ಮುಂದಾಳತ್ವವನ್ನು ವಹಿಸಲಿದ್ದಾರೆ. ಅಲ್ಲದೆ ಅಮೆರಿಕ ಮತ್ತು ಕೆನಡಾದಲ್ಲಿ ನೆಲೆಗೊಂಡಿರುವ ಕಾರ್ಯಕಾರಿ ಸಮಿತಿಯ ಸದಸ್ಯರು ಈ ಉಪಕ್ರಮವನ್ನು ಉತ್ತೇಜಿಸಲಿದ್ದಾರೆ. ಇದರ ಮುಖ್ಯಸ್ಥರು ಭಾರತದ ಎಲ್ಲಾ ಕ್ಯಾಂಪಸ್‌ಗಳೊಂದಿಗೆ ಮತ್ತು ಬೆಂಗಳೂರಿನಲ್ಲಿರುವ ಸೆಂಟ್ರಲ್ ಕ್ಯಾಂಪಸ್ ಕ್ರೈಸ್ಟ್ ಜತೆಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.