ಪ್ರೇಮಿಗಳ ದಿನಕ್ಕೆ ಚೌಕಾಬಾರ ಹಾಡು; ರೊಮ್ಯಾಂಟಿಕ್ ಸಾಂಗ್ ಬಿಡುಗಡೆ ಮಾಡಿದ ಚಿತ್ರತಂಡ

Chowkabara
Published on

ಬೆಂಗಳೂರು: ವಿಕ್ರಮ್ ಸೂರಿ ನಿರ್ದೇಶನದ ನಮಿತಾ ರಾವ್ ನಾಯಕಿಯಾಗಿ ನಟಿಸಿ, ನಿರ್ವಿುಸಿರುವ ಮಣಿ ಆರ್. ರಾವ್ ಅವರ ಕಾದಂಬರಿ ಆಧಾರಿತ ಚಿತ್ರ ‘ಚೌಕಾಬಾರ’. ಪ್ರೇಮಿಗಳ ದಿನಾಚರಣೆ ಅಂಗವಾಗಿ ಚಿತ್ರತಂಡ ಇತ್ತೀಚೆಗಷ್ಟೆ ರೊಮ್ಯಾಂಟಿಕ್ ಸಾಂಗ್ ಒಂದನ್ನು ಬಿಡುಗಡೆ ಮಾಡಿದೆ.

‘ಚೌಕಾಬಾರ’ ಕುರಿತು ಮಾತನಾಡುವ ನಮಿತಾ ರಾವ್, ‘ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ. ಅಮೆರಿಕದಲ್ಲೂ ಮಾರ್ಚ್​ನಲ್ಲೇ ರಿಲೀಸ್ ಮಾಡಲಿದ್ದೇವೆ. ಏಪ್ರಿಲ್​ನಲ್ಲಿ ದುಬೈ, ಆಸ್ಟ್ರೇಲಿಯಾ ಮುಂತಾದ ಕಡೆ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಇದೇ 28ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ’ ಎಂದು ಮಾಹಿತಿ ನೀಡುತ್ತಾರೆ.

ಪ್ರೇಮಿಗಳ ದಿನದ ಅಂಗವಾಗಿ ಬಿಡುಗಡೆಯಾಗಿರುವ ರೊಮ್ಯಾಂಟಿಕ್ ಹಾಡಿಗೆ ಬಿ.ಆರ್. ಲಕ್ಷ್ಮಣ್ ರಾವ್ ಸಾಹಿತ್ಯ ಬರೆದಿದ್ದು, ನಕುಲ್ ಅಭಯಂಕರ್ ಮತ್ತು ರಮ್ಯ ಭಟ್ ಹಾಡಿದ್ದಾರೆ. ವಿಹಾನ್ ಪ್ರಭಂಜನ್ ಚಿತ್ರದ ನಾಯಕನಾಗಿದ್ದು, ಕಾವ್ಯ ರಮೇಶ್, ಸಂಜಯ್ ಸೂರಿ, ಸುಮಾ ರಾವ್, ಪ್ರಥಮಾ ಪ್ರಸಾದ್, ಮಧು ಹೆಗಡೆ, ದಮಯಂತಿ ನಾಗರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ರೂಪಾ ಪ್ರಭಾಕರ್ ಸಂಭಾಷಣೆ, ರವಿರಾಜ್ ಛಾಯಾಗ್ರಹಣ, ಶಶಿಧರ್ ಸಂಕಲನವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net