

ಕಂಪಲಾಪುರ: ಇಲ್ಲಿನ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ 12ನೇ ವರ್ಷದ ಜಯಂತಿ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಮುಂಜಾನೆಯಿಂದಲೇ ಪುರೋಹಿತ ಗಣಪತಿಭಟ್ ನೇತೃತ್ವದಲ್ಲಿ ಅರ್ಚಕರು ಪೂಜಾ ವಿಧಿ-ವಿಧಾನಗಳು ನೆರವೇರಿಸಿದರು. ಮಹಾ ಮಂಗಳಾರತಿ ನಂತರ ನಾಗಾ ವಿದ್ಯಾಸಂಸ್ಥೆ ಆವರಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಉತ್ಸವ ಸಾಗಿತು. ಚಂಡೆ, ಕರಡಿ ಹಾಗೂ ಮಂಗಳವಾದ್ಯ ಮೆರವಣಿಗೆಗೆ ಮೆರುಗು ನೀಡಿತು. ಭಕ್ತರು ಪೂಜೆ ಸಲ್ಲಿಸಿ ಪುನೀತರಾದರು.
ಚಂಡೆ ನಾದಕ್ಕೆ ದೇವಾಂಗ ಸಮಾಜದ ಮಹಿಳೆಯರು ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು. ಯುವ ಸಮುದಾಯದವರು ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೆರವಣಿಗೆ ನಂತರ ದೇವಿಯ ಮೂರ್ತಿಯನ್ನು ಮೂಲ ಸ್ಥಾನದಲ್ಲಿ ಇರಿಸಲಾಯಿತು.