ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಅಭಿವೃದ್ಧಿಗೆ ಒತ್ತಾಯ

3-RNR-03
Published on

ರಾಣೆಬೆನ್ನೂರ: ತಾಲೂಕಿನ ಚೌಡಯ್ಯದಾನಪುರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ನಿಜಶರಣ ಅಂಬಿಗರ ಚೌಡಯ್ಯನವರ ಮಠದ ಅಭಿನವ ಅಂಬಿಗರ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಗ್ರಾಪಂ ಪಿಡಿಒ ವೀರಪ್ಪ ತಳವಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿರುವ ಅಂಬಿಗ ಸಮುದಾಯದ 39 ಪರ್ಯಾಯ ಪಂಗಡಗಳನ್ನು ಹೊಂದಿದ್ದು, ಈ ಎಲ್ಲ ಪರ್ಯಾಯ ಪಂಡದ ಜನತೆಯ ಆರಾಧ್ಯ ಕುಲಗುರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರಾಗಿದ್ದಾರೆ. ಅವರ ಐಕ್ಯ ಮಂಟಪ ಅಭಿವೃದ್ಧಿ ಕಾಣದೆ ಇರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.

ಆದ್ದರಿಂದ ಸಿಎಂ ಸಿದ್ದರಾಮಯ್ಯನವರು ಈ ಬಾರಿಯ ಬಜೆಟ್​ನಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ಪ್ರಾಧಿಕಾರ ಮಾಡಬೇಕು. ಸದ್ಯದಲ್ಲಿ 50 ಕೋಟಿ ರೂ. ಅನುದಾನ ಒದಗಿಸಬೇಕು ಮತ್ತು ಐಕ್ಯಮಂಟಪದ ಅಭಿವೃದ್ಧಿಗೆ ಅಡ್ಡಿಯಾಗಿರುವ ಭಾರತೀಯ ಪುರಾತತ್ವ ಇಲಾಖೆಯಿಂದ ಆಕ್ಷೇಪಣೆ ತೆರವುಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿಯ ಬ್ರಹ್ಮಷಿರ್ ಶ್ರೀ ರಾಜು ಗುರು ಸ್ವಾಮೀಜಿ, ಪ್ರಮುಖರಾದ ಅಂಬಿಕಾ ಜಾಲಗಾರ, ಲಕ್ಷ$್ಮಣ ದೀಪಾವಳಿ, ವೀರೇಶ ಬಾಕಿರ್, ಪರಮೇಶ ದೀಪಾವಳಿ, ವೀರಣ್ಣ ಗಂಗಮ್ಮನವರ, ಚಂದ್ರಪ್ಪ ಮಾಳಗಿ, ಪ್ರಕಾಶ ದೀಪಾವಳಿ, ರಾವೇಂದ್ರ ಹಳ್ಳಳ್ಳಿ, ನಾಗರಾಜ ದೀಪಾವಳಿ, ಹನುಮಂತಪ್ಪ ಜಾಲಗಾರ, ರಮೇಶ ಕುಂಚೂರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net