ಹೊಳೆ ಗಂಗಮ್ಮ ಪೂಜೆ ನೆರವೇರಿಸಿದ ಚೌಡಯ್ಯದಾನಪುರ ಗ್ರಾಮಸ್ಥರು

13-RNR-06
Published on

ರಾಣೆಬೆನ್ನೂರ: ತಾಲೂಕಿನ ಚೌಡಯ್ಯದಾನಪುರ ಗ್ರಾಮದ ತುಂಗಭದ್ರಾ ನದಿಯಲ್ಲಿ ಗಂಗಾಮತ ಸಮಾಜದವರು ಬುಧವಾರ ರಾತ್ರಿ ಹೊಳಿಗಂಗಮ್ಮನ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.
ಉತ್ತಮ ಮಳೆ ಬೆಳೆ ಹಾಗೂ ನದಿಯಲ್ಲಿ ನೀರು ಸಮೃದ್ಧಿಯಿಂದ ಕೂಡಿರಲಿ, ರೈತಾಪಿವರ್ಗದವರಿಗೆ ಹಾಗೂ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಸದುದ್ದೇಶದಿಂದ ಪೂಜೆ ನೆರವೇರಿಸಲಾಯಿತು. ಮಹಿಳೆಯರು ನದಿಯಲ್ಲಿ ಗಂಗಾದೇವಿಗೆ ವಿವಿಧ ಧಾರ್ಮಿಕ ಪೂಜೆ ಸಲ್ಲಿಸಿದರು.
ಪ್ರಮುಖರಾದ ಧರ್ಮಪ್ಪ ಕುಂಚೂರ, ಮಂಜಪ್ಪ ಹುಲ್ಮನಿ, ಪ್ರಕಾಶ ದೀಪಾವಳಿ, ರಾಘವೇಂದ್ರ ಹಳ್ಳಳ್ಳಿ, ಪಕ್ಕಿರೇಶ ದೀಪಾವಳಿ, ಮಲ್ಲಿಕಾರ್ಜುನ ಬಾರ್ಕಿ, ಬಸವರಾಜ ಬಾರ್ಕಿ, ಹನುಮಂತಪ್ಪ ಜಾಲಗಾರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net