Jani master case: 'ಜಾನಿ ನಿರಪರಾಧಿ ಅಂತ ಸಾಬೀತಾದ್ರೆ ಏನು ಮಾಡ್ತೀರಿ': ಅನಿ ಮಾಸ್ಟರ್ ಪ್ರಶ್ನೆ

Jani Mastersexual harassment: ನೃತ್ಯ ಸಂಯೋಜಕ ಜಾನಿ ಮಾಸ್ಟರ್​ಗೆ ನೀಡಬೇಕಿದ್ದ ರಾಷ್ಟ್ರೀಯ ಪ್ರಶಸ್ತಿ ರದ್ದು
Published on

ಹೈದರಾಬಾದ್​: ಜಾನಿ ವಿರುದ್ಧ ಕೇಸ್(Jani master case) ಹಾಕಿದ್ದಕ್ಕೆ ಶಾಕ್ ಆಗಿದ್ದೇನೆ. ಅವರ ರಾಷ್ಟ್ರೀಯ ಪ್ರಶಸ್ತಿ ರದ್ದತಿಯಿಂದ ನನಗೆ ತುಂಬಾ ಬೇಸರವಾಗಿದೆ ಎಂದು ನೃತ್ಯ ನಿರ್ದೇಶಕಿ ಅನಿ ಮಾಸ್ಟರ್ ಅಭಿಪ್ರಾಯಪಟ್ಟರು.

ಜಾನಿ ವಿರುದ್ಧದ ಪ್ರಕರಣದ ಬಗ್ಗೆ ನನಗೆ ಆಘಾತವಾಗಿದೆ. ತೆಲುಗು ತಂತ್ರಜ್ಞರಿಗೆ ನೀಡಿದ ಪ್ರಶಸ್ತಿ ಇದಾಗಿದ್ದು, ಅವರ ರಾಷ್ಟ್ರೀಯ ಪ್ರಶಸ್ತಿ ರದ್ದತಿ ನನಗೆ ತುಂಬಾ ನೋವಾಗಿದೆ ಎಂದರು.

ಜಾನಿ ಜೊತೆ ಎರಡು ವರ್ಷ ಕೆಲಸ ಮಾಡಿದ್ದೇನೆ. ಆತ ಒಳ್ಳೆಯವನು. ಅವನ ಮೇಲೆ ಆರೋಪ ಮಾಡುವುದು ನೋವಿನ ಸಂಗತಿ? ಜಾನಿ ನಿಜವಾಗಿಯೂ ತಪ್ಪಿತಸ್ಥನಾಗಿದ್ದರೆ ಶಿಕ್ಷೆಯಾಗಬೇಕು. ಆದರೆ ಜಾನಿ ನಿರಪರಾಧಿ ಎಂದು ಕಂಡುಬಂದರೆ ಏನು ಮಾಡಬೇಕು. ಕೊರಿಯೋಗ್ರಾಫರ್ ಆಗಿ ಈ ಕ್ಷೇತ್ರದಲ್ಲಿ ಮತ್ತೆ ಮೇಲೆ ಬರಲು ಸಾಧ್ಯವಾಗುತ್ತದೆಯ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ನನ್ನ ವೃತ್ತಿ ಜೀವನದಲ್ಲಿ ಕಾಸ್ಟಿಂಗ್ ಕೌಚ್ ಎದುರಿಸಿಲ್ಲ. ಸದ್ಯ ಜಾನಿ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಜಾನಿಯೇ ಕೆಲವು ದಿನಗಳ ಕಾಲ ದೇವರು ಎಂದಿದ್ದಾಳೆ. ಜಾನಿ ಮಾಸ್ಟರ್ ಬಳಿ ಕೆಲಸ ಮಾಡುವಾಗ ಸಂತ್ರಸ್ತೆ ಖುಷಿಯಾಗಿದ್ದಳು. ಆದರೆ ಹಠಾತ್ ಆರೋಪಗಳನ್ನು ಮಾಡುವುದು ಸರಿಯಾ? ಜಾನಿ ನನ್ನ ಗುರು, ಅವರು ಜೈಲಿನಲ್ಲಿ ಇರುವುದು ಸರಿಯಲ್ಲ ಅನ್ನಿಸುತ್ತಿದೆ. ಇದು ಹೆಣ್ಣುಮಕ್ಕಳ ಸಮಸ್ಯೆ ಮತ್ತು ಇದು ಸೂಕ್ಷ್ಮ ವಿಷಯವಾಗಿರುವುದರಿಂದ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ. ಜಾನಿ ವಿರುದ್ಧ ಉದ್ಯಮದ ಪಿತೂರಿಯ ಬಗ್ಗೆ ನಾನು ಮಾತನಾಡಲಾರೆ ಎಂದರು.

ಜಾನಿಗೆ ರಾಷ್ಟ್ರಪ್ರಶಸ್ತಿ ರದ್ದು ಮಾಡಿರುವುದು ಸರಿಯಲ್ಲ. ಆತ ಶೂನ್ಯದಿಂದ ಮೊದಲ ಸ್ಥಾನಕ್ಕೆ ಏರಿದವರು. ಆತನ ವಿರುದ್ಧ ಸುಳ್ಳು ಪ್ರಚಾರ ಮಾಡಬೇಡಿ. ಅವರಿಗೆ ಈ ರೀತಿಯ ಪರಿಸ್ಥಿತಿ ಬಂದಿರುವುದು ಬೇಸರ ತಂದಿದೆ ಡ್ಯಾನ್ಸರ್​ ಅಸೋಸಿಯೇಷನ್​ಸದಸ್ಯರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net