ಮೆಗಾಸ್ಟಾರ್​ ಚಿರಂಜೀವಿ ಅಭಿನಯದ 'ವಿಶ್ವಂಭರ 'ದಲ್ಲಿ ಅತೀತ ಶಕ್ತಿಗಳ ಹೋರಾಟ: ಚಿತ್ರ ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ..

vishwambara
Published on

ಹೈದರಾಬಾದ್​: ಹಿರಿಯ ನಟ ಚಿರಂಜೀವಿ ಅಭಿನಯದ 156ನೇ ಅದ್ಧೂರಿ ಚಿತ್ರ 'ವಿಶ್ವಂಭರ'. 'ಬಿಂಬಿಸಾರ' ನಿರ್ದೇಶಕ ವಸಿಷ್ಠ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇತ್ತೀಚೆಗೆ ಪ್ರಕಟಿಸಿದೆ. ಅದರಂತೆ ಮುಂದಿನ ವರ್ಷ ಸಂಕ್ರಾಂತಿ ಉಡುಗೊರೆಯಾಗಿ ಜನವರಿ 10ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಹೇಳಲಾಗಿದೆ.

'ಅತೀತ ಶಕ್ತಿಗಳ ಹೋರಾಟದಿಂದ ದಂತಕಥೆಗಳು ಹೊರಹೊಮ್ಮುತ್ತವೆ' ಎಂಬ ಪ್ರಬಲ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದ್ದಾರೆ. ಈ ಹ್ಯಾಶ್‌ಟ್ಯಾಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಶುರುವಾಗಿದೆ. ಸದ್ಯ ಇದರ ಚಿತ್ರೀಕರಣ ಶರವೇಗದಲ್ಲಿ ಸಾಗುತ್ತಿದೆ.

ಈ ಸಿನಿಮಾದಲ್ಲಿ ಹೆಚ್ಚು ಫಿಟ್ ಆಗಿ ಕಾಣಲು ಚಿರಂಜೀವಿ ಜಿಮ್ ನಲ್ಲಿ ಕಸರತ್ತು ಮಾಡಿ ಬೆವರಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಅವರು ಶೇರ್ ಮಾಡಿದಾಗ ಅದು ವೈರಲ್ ಆಗಿದೆ.

ಮೆಗಾಸ್ಟಾರ್ ಶುದ್ಧ ಫ್ಯಾಂಟಸಿ ಪ್ರಕಾರದ ಚಿತ್ರದಲ್ಲಿ ನಟಿಸಿ ಮೂರು ದಶಕಗಳು ಕಳೆದಿವೆ. ಈ ಸಿನಿಮಾಗಾಗಿ ಸೃಷ್ಟಿಯಲ್ಲಿ ಪ್ರಮುಖ ಅಂಶಗಳಾದ ಪಂಚಭೂತಗಳು, ತ್ರಿಶೂಲ ಶಕ್ತಿಗಳು ಮತ್ತು ಇವುಗಳಿಗೆ ಅಧ್ಯಾತ್ಮಿಕತೆಯನ್ನು ಸೇರಿಸಿ ಹೊಸ ಲೋಕವನ್ನೇ ಸೃಷ್ಟಿಸುತ್ತಿದ್ದೇವೆ. ಅದನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಾರೆ' ಎಂದು ನಿರ್ದೇಶಕರು ಹೇಳಿದ್ದು, ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸುವಂತೆ ಮಾಡಿದ್ದಾರೆ. ಚಿರುಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ಮತ್ತು ಮೃಣಾಲ್ ಠಾಕೂರ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೀರವಾಣಿ ಸ್ವರ ಬ್ಯಾನರ್ ಅಡಿಯಲ್ಲಿ ಯುವಿ ಕ್ರಿಯೇಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net