VIDEO| ಜೂನಿಯರ್​ ಚಿರುವಿನ ಎಕ್ಸ್​ಕ್ಲೂಸಿವ್​ ವಿಡಿಯೋಗಳು...

Chiru
Published on

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಕಾಲಿಕ ಮರಣದಿಂದ ಅತೀವ ನೋವಿನಲ್ಲಿದ್ದ ಮೇಘನಾ ರಾಜ್​ಗೆ ಜೂನಿಯರ್​ ಚಿರು ಆಗಮನದಿಂದ ಸಂತಸ ಮರಳಿ ಬಂದಿದೆ. ಸರ್ಜಾ ಕುಟುಂಬದಲ್ಲೂ ಸಂಭ್ರಮ ಮನೆ ಮಾಡಿದೆ. ಮರೆಯಾದ ಚಿರು ಮತ್ತು ಮಗುವಿನ ರೂಪದಲ್ಲಿ ಮರಳಿ ಬಂದಿದ್ದಾನೆ ಎಂಬ ಸಂತೋಷ ಎಲ್ಲರಲ್ಲೂ ಇದೆ.

ಇನ್ನು ಅಭಿಮಾನಿಗಳ ನಿರೀಕ್ಷೆಯಂತೆಯೇ ಜೂನಿಯರ್​ ಚಿರು ಆಗಮಿಸಿದ್ದು, ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಹೀಗಾಗಿಯೇ ಟ್ವಿಟರ್​ನಲ್ಲಿ ಚಿರಂಜೀವಿ ಸರ್ಜಾ ಹೆಸರು ಮತ್ತೆ ಟ್ರೆಂಡಿಂಗ್​ನಲ್ಲಿದೆ. ಗಂಡು ಮಗು ಜನಿಸುತ್ತಿದ್ದಂತೆಯೇ ಮಗುವಿನ ಫೋಟೋ ಹಾಗೂ ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಚಿರು ನೆನಪಿನ ಜತೆಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇನ್ನು ಚಿರು-ಮೇಘನಾ ನಿಶ್ಚಿತಾರ್ಥದ ದಿನದಂದೇ ಜೂನಿಯರ್​ ಚಿರು ಆಗಮಿಸಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net