

ಆಂಧ್ರಪ್ರದೇಶ: ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿ ಅವರ ಮುಂದಿನ 'ಮೆಗಾ 156' ಚಿತ್ರವನ್ನು ಪುತ್ರಿ ಸುಶ್ಮಿತಾ ಕೊನಿಡೇಲಾ ನಿರ್ಮಾಣ ಮಾಡಲು ಮುಂದಾಗಿರುವ ಸುದ್ದಿ ಇದೀಗ ಚಿರಂಜೀವಿ ಅಭಿಮಾನಿಗಳಿಗೆ ಭಾರೀ ಸಂತಸ ತಂದಿದೆ.
ಇಂದು ಮೆಗಾಸ್ಟಾರ್ ಜನ್ಮದಿನ. ಈ ದಿನದಂದೇ ಅವರ ಮುಂದಿನ ಚಿತ್ರ 'ಮೆಗಾ 156' ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು, ಈ ಸಿನಿಮಾವನ್ನು ಚಿರಂಜೀವಿ ಪುತ್ರಿ ಸುಶ್ಮಿತಾ ಕೊನಿಡೇಲಾ ಅವರೇ ನಿರ್ಮಾಣ ಮಾಡಲಿದ್ದಾರೆ. ಚಿರಂಜೀವಿ ಅಭಿನಯಿಸಲಿರುವ ಈ ಬಹುನಿರೀಕ್ಷಿತ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರಲಾಗುವುದು ಎಂದು ತಿಳಿಸಿದೆ.
ನಿರ್ಮಾಪಕರು ಮತ್ತು ವಸ್ತ್ರ ವಿನ್ಯಾಸಕರಾಗಿರುವ ಚಿರಂಜೀವಿ ಪುತ್ರಿ ಸುಶ್ಮಿತಾ ಕೊನಿಡೇಲಾ, ಇದೀಗ ತಮ್ಮ ತಂದೆಯ ಮುಂದಿನ ಚಿತ್ರವನ್ನು ತಾವೇ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರವು ಗೋಲ್ಡ್ ಬಾಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸಿದ್ಧವಾಗಲಿದೆ. ಸದ್ಯ ಚಿತ್ರದ ನಿರ್ದೇಶಕ ಮತ್ತು ನಾಯಕಿಯ ಬಗ್ಗೆ ಯಾವುದೇ ಮಾಹಿತಿಯನ್ನು ಚಿತ್ರ ತಯಾರಕರು ಬಹಿರಂಪಡಿಸಿಲ್ಲ,(ಏಜೆನ್ಸೀಸ್).