ಗಿನ್ನಿಸ್ ದಾಖಲೆ ಸೇರಿತು ಮೆಗಾಸ್ಟಾರ್​ ಚಿರಂಜೀವಿ ಡ್ಯಾನ್ಸ್​! chiranjeevi dance guinness record

ಗಿನ್ನಿಸ್ ದಾಖಲೆ ಸೇರಿತು ಮೆಗಾಸ್ಟಾರ್​ ಚಿರಂಜೀವಿ ಡ್ಯಾನ್ಸ್​
ಚಿರಂಜೀವಿ
Published on

ಹೈದರಾಬಾದ್​: ನಾಲ್ಕೈದು ದಶಕದಿಂದ ಸ್ಟಾರ್​ ನಟನಾಗಿ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಮೆಗಾಸ್ಟಾರ್​ ಚಿರಂಜೀವಿ ನಟನೆ ಜೊತೆಗೆ ಡ್ಯಾನ್ಸ್ ಮಾಡುವುದರಲ್ಲಿ ಅವರಿಗೆ ಸರಿಸಾಟಿ ಅವರೇ ಎನ್ನಬಹುದು. ಅದ್ಭುತ ನಟನೆಯ ಜೊತೆಗೆ ಅವರ ದೇಹದಲ್ಲಿರುವ ಕುಣಿತ, ಆ ನೃತ್ಯಗಳಲ್ಲಿರುವ ಚೆಲುವು ಮತ್ತು ಲಯವೇ ಕಾರಣ ಎಂದು ಹೇಳಬಹುದು. ಇದೀಗ ಆ ನೃತ್ಯಗಳು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದೆ. chiranjeevi dance guinness record

ಚಿರಂಜೀವಿ 150 ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ. ನೂರಾರು ಹಾಡುಗಳಿಗೆ ತಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿದ್ದಾರೆ. ಇವರ ಜೊತೆ ಅನೇಕ ನಾಯಕಿಯರು ನೂರಾರು ಸಿನಿಮಾ ಮಾಡಿದ್ದಾರೆ. ಆದರೆ ಇಡೀ ದೇಶದಲ್ಲಿ ಚಿರಂಜೀವಿ ಅವರಂತೆ ಹೆಜ್ಜೆ ಹಾಕಿದ ನಾಯಕ ಮತ್ತೊಬ್ಬರಿಲ್ಲ ಎಂದರೆ ಅತಿಶಯೋಕ್ತಿಯಲ್ಲ.

 156 ಚಿತ್ರ 537 ಹಾಡು:

ಈಗ ಅವರ ನೃತ್ಯಗಳು ಗಿನ್ನೆಸ್ ಪುಸ್ತಕದಿಂದ ಗುರುತಿಸಲ್ಪಟ್ಟಿವೆ. 156 ಚಿತ್ರಗಳಲ್ಲಿ 537 ಹಾಡುಗಳಲ್ಲಿ 24000 ಕ್ಷಣಗಳನ್ನು ಪ್ರದರ್ಶಿಸಿದ ಅಪರೂಪದ ನಟ ಎಂಬ ಗಿನ್ನಿಸ್ ದಾಖಲೆಯನ್ನು ಚಿರಂಜೀವಿ ಹೊಂದಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ನೃತ್ಯಕ್ಕಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿದ್ದಾರೆ. ಭಾನುವಾರ ಸಂಜೆ ಹೈದರಾಬಾದ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಸಮ್ಮುಖದಲ್ಲಿ ಚಿರಂಜೀವಿ ಅವರ ಗಿನ್ನಿಸ್ ದಾಖಲೆಯನ್ನು ಗಿನ್ನಿಸ್ ಪ್ರತಿನಿಧಿಗಳು ಪ್ರಕಟಿಸಲಿದ್ದಾರೆ.

ಇದು ಮೆಗಾಸ್ಟಾರ್​ ಅಭಿಮಾನಿಗಳಿಗೆ ಹಾಗೂ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net