ಬಾಂಗ್ಲಾದಲ್ಲಿ ಚಿನ್ಮಯ್ ದಾಸ್ ಬಂಧನ; ನಾನು ಈ ವಿಚಾರವಾಗಿ ಕೇಂದ್ರ ಸರ್ಕಾರದ ಜತೆ ನಿಲ್ಲುತ್ತೇನೆ ಎಂದ Mamata Banerjee

mamata-banerjee
Published on

ಕೋಲ್ಕತ್ತಾ: ನರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಇಸ್ಕಾನ್​ ಸಂಸ್ಥೆಯ ಸನ್ಯಾಸಿ ಚಿನ್ಮಯ್ ದಾಸ್​ ಬಂಧನ ಮತ್ತು ಅಲ್ಲಿನ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಭಾತರ ಸೇರಿದಂತೆ ಇತರ ಕಡೆಯ ನಾಯಕರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ದಾಖಲಾಗುತ್ತಿವೆ.

ಇದೇ ವಿಚಾರವನ್ನು ಇಟ್ಟುಕೊಂಡು ಕೋಲ್ಕತ್ತಾದಲ್ಲಿ ಗುರುವಾರ (ನ.28) ರಂದು ಮಾತನಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee), ಇಸ್ಕಾನ್​ ಸಂಸ್ಥೆಯ ಸನ್ಯಾಸಿ ಬಂಧನವನ್ನು ತೀವ್ರವಾಗಿ ಖಂಡಿಸುವೆ ಎಂದಿರುವ ಅವರು, ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಜತೆ ನಿಲ್ಲುವೆ ಎಂದಿದ್ದಾರೆ.

ಯಾವುದೇ ಧರ್ಮಕ್ಕೆ ಧಕ್ಕೆಯಾಗುವುದನ್ನು ನಾವು ಬಯಸುವುದಿಲ್ಲ, ನಾನು ಇಲ್ಲಿನ ಇಸ್ಕಾನ್​ ಸಂಸ್ಥೆ ಜತೆ ಮಾತನಾಡಿರುವೆ. ಇದು ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದು. ಹಾಗಾಗಿ, ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರದ ಜತೆ ಮಾತನಾಡಿ ಸೂಕ್ತ ಕ್ರಮಕೈಗೊಳ್ಳಲಿ. ಇದಕ್ಕೆ ನಾನು ಕೇಂದ್ರದ ಜತೆ ನಿಲ್ಲುವೆ ಎಂದಿದ್ದಾರೆ. ಅಲ್ಲದೆ, ಶಾಸಕಾಂಗ ಸಭೆಯಲ್ಲಿ ಕೂಡ ಇದೇ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದ್ದಾರೆ.

ಈ ಮುಂಚೆ ತೃಣಮೂಲ ಕಾಂಗ್ರೆಸ್​ ಸಂಸದ ಅಭಿಷೇಕ್​ ಬ್ಯಾನರ್ಜಿ ಮತ್ತು ಹಿರಿಯ ನಾಯಕ ಸೌಗತ್​ ರಾಯ್​ ಹಿಂದುಗಳ ಮೇಲಿನ ದಾಳಿಯನ್ನು ಖಂಡಿದ್ದರು. ''ಬಾಂಗ್ಲಾದಲ್ಲಿ ನಡೆಯುತ್ತಿರುವುದು ಹಿಂಸಚಾರ ಅತ್ಯಂತ ದುರದೃಷ್ಟಕಾರ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಮಾಡಬೇಕು'' ಎಂದು ಕೇಂದ್ರದ ಪರ ಬ್ಯಾಟ್​ ಬೀಸಿದ್ದರು.

ಕೇಂದ್ರ ಸಚಿವ ಗಿರಿರಾಜ್ ಸಿಂಗ್​, ಬಾಂಗ್ಲಾದೇಶ ಮಧ್ಯಂತರ ಸರ್ಕಾರ ಮೂಲಭೂತವಾದಿಗಳ ಕಪಿ ಮುಷ್ಠಿಯಲ್ಲಿದೆ ಎಂದು ಕಿಡಿಕಾರಿದ್ದರು. ಕೇಂದ್ರ ಸರ್ಕಾರ ಸೇರಿದಂತೆ ಕೇಂದ್ರ ಭಾರತದ ವಿವಿಧ ಪ್ರಕ್ಷಗಳ ಮುಖಂಡರು ಅಲ್ಲಿನ ಹಿಂಚಾರದ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net