ಲೈವ್​ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ತಿಂದು ಪ್ರಾಣ ಬಿಟ್ಟ ಸೋಶಿಯಲ್​​ ಮೀಡಿಯಾ ಸ್ಟಾರ್​

Chinese Influencer 24 Dies From Overeating During Live Broadcast
Published on

ಚೀನಾ: ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 24 ವರ್ಷದ ಸೋಶಿಯಲ್​​ ಮೀಡಿಯಾ ಸ್ಟಾರ್​ವೊಬ್ಬಳು ನೇರಪ್ರಸಾರದಲ್ಲೇ ಸಾವನ್ನಪ್ಪಿದ್ದಾಳೆ. ಈ ಘಟನೆ ಚೀನಾದಲ್ಲಿ ಜುಲೈ 14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ಯಾನ್ ಕ್ಸಿಯಾಟಿಂಗ್( 24) ಮೃತ ಯುವತಿ. ಈಕೆ 10 ಗಂಟೆಗಳಿಗೂ ಹೆಚ್ಚು ಕಾಲ ತಿನ್ನಲು ಅಗತ್ಯವಿರುವ ಅಂತಹ ಸವಾಲುಗಳನ್ನು ತೆಗೆದುಕೊಳ್ಳಲು ಹೆಸರುವಾಸಿಯಾಗಿದ್ದಳು. ಅತೀಯಾದ ಆಹಾರ ಸೇವನೆ ಈಕೆ ಪ್ರಾಣಕ್ಕೆ ಕುತ್ತು ತಂದಿದೆ ಎನ್ನಲಾಗಿದೆ.

ಕ್ಸಿಯಾಟಿಂಗ್ ಪ್ರತಿ ಊಟಕ್ಕೆ 10 ಕೆಜಿ ಆಹಾರವನ್ನು ಸೇವಿಸುತ್ತಿದ್ದರು. ಆಕೆಯ ಪೋಷಕರು ಮತ್ತು ಕುಟುಂಬಸ್ಥರು ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದರು ಆಕೆ ಈ ಮಾತನ್ನು ಕೇಳುತ್ತಿರಲಿಲ್ಲ. ಅವಳು ಅತೀಯಾಗಿ ಆಹಾರ ಸೇವನೆ ಮಾಡುವುದನ್ನೇ ರೂಢಸಿಇಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.

ಕ್ಸಿಯಾಟಿಂಗ್ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಹೊಟ್ಟೆಯು ವಿರೂಪಗೊಂಡಿದೆ ಮತ್ತು ಜೀರ್ಣವಾದ ಆಹಾರವನ್ನಯ ಹೊಂದಿತ್ತು ಎನ್ನಲಾಗಿದೆ. ಈಕೆ ಸಾವಿನ ಸುದ್ದಿ ಪ್ರಸಾರ ವಾಗುತ್ತಿದ್ದಂತೆ ಅತೀಯಾದ ಆಹಾರ ಸೇವನೆ ಕುರಿತಾಗಿ ಜಾಗೃತಿ ಶುರುವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಇಷ್ಟಗಳು ಮತ್ತು ಜನಪ್ರಿಯತೆ ಗಳಿಸಲು ರೀಲ್ಸ್ ಶೂಟ್ ಮಾಡಲು ಅಥವಾ ಸ್ಟಂಟ್ ಮಾಡಲು ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಕೆಲವು ನಿದರ್ಶನಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net