ಚೀನೀಸ್ ಫಿಮೇಲ್​ ಜೇಸಸ್ ಪ್ರಭಾವ ಹೆಚ್ಚಳ: ಬೈಬಲ್ ಜಾಗಕ್ಕೆ ದ ವರ್ಡ್​ ಅಪಿಯರ್ಸ್ ಇನ್ ದ ಫ್ಲೆಶ್ !

The Church of Almighty God Cult
The Church of Almighty God Cult
Published on

ಕೋಹಿಮಾ: ಚೀನಾದ ಫಿಮೇಲ್ ಜೇಸಸ್​ ಪ್ರಭಾವ ಈಗ ಈಶಾನ್ಯ ರಾಜ್ಯಗಳತ್ತ ತಲುಪಿದ್ದು, ಅಲ್ಲಿನ ಚರ್ಚ್​ಗಳಲ್ಲಿ ಆತಂಕ, ಕಳವಳ ಶುರುವಾಗಿದೆ. ಚೀನಾದ ಚರ್ಚ್​ ಆಫ್ ಆಲ್​ಮೈಟಿ ಗಾಡ್ ಅಥವಾ ಈಸ್ಟರ್ನ್​ ಲೈಟ್ನಿಂಗ್ ಕಲ್ಟ್​ ಚರ್ಚ್ ಬಣದವರು ಮಹಿಳೆಯೊಬ್ಬಳ ಮೂಲಕ ಜೇಸಸ್​ ಮಾತನಾಡುತ್ತಿದ್ದು, ಆಕೆ ಹೇಳಿದ್ದನ್ನು ನಾವೆಲ್ಲರೂ ಪಾಲಿಸಬೇಕು ಎಂದು ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದ ನಾಗಾಲ್ಯಾಂಡ್​ ಬ್ಯಾಪಿಸ್ಟ್​ ಚರ್ಚ್​ ಕೌನ್ಸಿಲ್​(ಎನ್​ಬಿಸಿಸಿ) ಕಳವಳ ವ್ಯಕ್ತಪಡಿಸಿದೆ.

ಚೀನೀಸ್​ ಫಿಮೇಲ್​ ಜೇಸಸ್​ ಬಣದವರು ಸದ್ದಿಲ್ಲದೇ ನಮ್ಮ ಸಮುದಾಯದೊಳಗೂ ಪ್ರವೇಶಿಸಿದ್ದು, ಹೆದರಿಸಿ ಬೆದರಿಸಿ ತಮ್ಮ ಬಣಕ್ಕೆ ಸೇರಿಸುತ್ತಿದ್ದಾರೆ. ಚರ್ಚ್​ ಆಫ್ ಆಲ್​ಮೈಟಿ ಗಾಡ್ ಅಥವಾ ಈಸ್ಟರ್ನ್​ ಲೈಟ್ನಿಂಗ್ ಕಲ್ಟ್​ ಚರ್ಚ್ ನದ್ದು ಸಂಘಟಿತ ಬಣವಾಗಿದೆ. ಫೇಸ್​ಬುಕ್​ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಮ್ಮೆಡೆಗೆ ಸೆಳೆಯುತ್ತಿದ್ದಾರೆ. ಜೇಸಸ್ ಅಥವಾ ದೇವರು ಭೂಮಿಗೆ ಮತ್ತೆ ಮಹಿಳೆಯ ರೂಪದಲ್ಲಿ ಅವತರಿಸಿದ್ದಾನೆ. ಅವರ ಹೆಸರು ಯಾಂಗ್ ಕ್ಸಿಯಾಂಗ್​ವಿನ್ ಎಂದು. ಲೈಟ್ನಿಂಗ್ ಡೆಂಗ್​ ಎಂದೂ ಅವರನ್ನು ಕರೆಯಲಾಗುತ್ತದೆ. ಬೈಬಲ್ ಜಾಗದಲ್ಲಿ ದ ವರ್ಡ್​ ಅಪಿಯರ್ಸ್​ ಇನ್ ದ ಫ್ಲೆಶ್ ಎಂಬ ಪುಸ್ತಕ ಬಂದಿದೆ ಎಂದು ಎನ್​ಬಿಸಿಸಿ ಆತಂಕ ವ್ಯಕ್ತಪಡಿಸಿದೆ.

ಅವರ ಬಣದ ಸಾಹಿತ್ಯಗಳನ್ನು ಅತ್ಯಾಧುನಿಕ ಟೆಕ್ನಾಲಜಿ ಬಳಸಿಕೊಂಡು ಆಕರ್ಷಕವಾಗಿ ಸಿದ್ಧಪಡಿಸುತ್ತಿದ್ದಾರೆ. ವಿಡಿಯೋ, ಆರ್ಟ್​ ವರ್ಕ್​, ಕಾಮಿಕ್ ಮುಂತಾದವುಗಳ ಮೂಲಕ ಎಲ್ಲರನ್ನೂ ತಮ್ಮತ್ತ ಸೆಳೆಯುತ್ತಿದ್ದಾರೆ. ಅಂತಹ ತಪ್ಪು ಪ್ರೊಪಗಾಂಡಕ್ಕೆ ಬಲಿಯಾಗದಂತೆ ನಮ್ಮ ಸಮಾಜದವರನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಗಾವಹಿಸಿ ಎಂದು ಎನ್​ಬಿಸಿಸಿ ತನ್ನ ಅನುಯಾಯಿಗಳಿಗೆ ಸೂಚನೆ ಕೊಟ್ಟಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net