50 ಕೆಜಿಗಿಂತ ಕಡಿಮೆ ತೂಕವಿದ್ದರೆ ಮನೆಯಿಂದ ಹೊರಗೆ ಬರಬೇಡಿ! ಬಿರುಗಾಳಿಗೆ ನೀವು ಹಾರಿಹೋಗುವಿರಿ... Beijing ಹವಾಮಾನ ಇಲಾಖೆ

Beijing
Published on

ಚೀನಾ: ( Beijing ) ನಿಮ್ಮ ತೂಕ 50 ಕೆಜಿಗಿಂತ ಕಡಿಮೆ ಇದ್ದರೆ, ಮನೆಯಿಂದ ಹೊರಗೆ ಹೋಗಬೇಡಿ. ಬೀಜಿಂಗ್​ನಲ್ಲಿ  ಬಿಸಲಿರುವ  ಗಾಳಿಗೆ ನೀವು ಹಾರಿಹೋಗುವಿರಿ. ಚೀನಾದ ಜನರು ಸಾಧ್ಯವಾದಷ್ಟು ರಸ್ತೆಗಳಿಂದ ದೂರವಿರಬೇಕೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ವಿವಿಧ ಸ್ಥಳಗಳಲ್ಲಿ ರೈಲುಗಳನ್ನು ನಿಲ್ಲಿಸಲಾಗಿದೆ.  ಉತ್ತರ ಚೀನಾ ಮತ್ತು ಬೀಜಿಂಗ್‌ನಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಹವಾಮಾನ ಇಲಾಖೆಯ ಪ್ರಕಾರ, ಭಾನುವಾರದವರೆಗೆ ಬೀಜಿಂಗ್, ಟಿಯಾಂಜಿನ್ ಮತ್ತು ಹೆಬೈಯ ಇತರ ಭಾಗಗಳಿಗೆ ಗಂಟೆಗೆ 150 ಕಿಲೋಮೀಟರ್ ವೇಗದ ಗಾಳಿ ಬೀಸಬಹುದು. ಇದು ಕಳೆದ 50 ವರ್ಷಗಳಲ್ಲಿ ಅತ್ಯಂತ ಪ್ರಬಲವಾದ ಗಾಳಿಯಾಗಿದೆ ಎಂದು ಚೀನಾ ಸರ್ಕಾರ ಜನರನ್ನು ಎಚ್ಚರಿಸಿದೆ.

ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವ ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಪ್ರವಾಸಿ ಪ್ರದೇಶಗಳು ಮತ್ತು ಐತಿಹಾಸಿಕ ತಾಣಗಳನ್ನು ಈಗಾಗಲೇ ಮುಚ್ಚಲಾಗಿದೆ. ಜನರು ಮನೆಗಳಿಂದ ಹೊರಗೆ ಬರದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಶನಿವಾರ ಸ್ಥಳೀಯ ಸಮಯ ಬೆಳಿಗ್ಗೆ 11:30 ರ ಹೊತ್ತಿಗೆ, ಬೀಜಿಂಗ್‌ನ ಎರಡು ಪ್ರಮುಖ ವಿಮಾನ ನಿಲ್ದಾಣಗಳಿಗೆ ಹೋಗುವ ಮತ್ತು ಹೋಗುವ 838 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಶಾಲಾ ತರಗತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಎಲ್ಲರೂ ಮನೆಯಲ್ಲೇ ಇರಬೇಕೆಂದು ಅಧಿಕಾರಿಗಳು ಒತ್ತಾಯಿಸಿದರು. 50 ಕೆಜಿಗಿಂತ ಕಡಿಮೆ ತೂಕವಿರುವವರು ಹಾರಿಹೋಗುವ ಅಪಾಯವಿದೆ ಎಂದು ಕೆಲವು ಚೀನಾದ ಮಾಧ್ಯಮಗಳು ಜನರಿಗೆ ಎಚ್ಚರಿಕೆ ನೀಡಿವೆ. ಇದರಿಂದಾಗಿ ಬೀಜಿಂಗ್‌ನ ಎಲ್ಲಾ ಬೀದಿಗಳು ನಿರ್ಜನವಾಗಿವೆ.

ಈ ಗಾಳಿಯಲ್ಲಿ ನಗರದಾದ್ಯಂತ ಸಾವಿರಾರು ಮರಗಳು ಬೀಳದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಯಿತು. ಕೆಲವು ಕೊಂಬೆಗಳನ್ನು ಕತ್ತರಿಸಲಾಯಿತು. ಆದರೆ, ಶನಿವಾರ ಸಂಜೆ ಬೀಸಿದ ಗಾಳಿಗೆ ಹೆಚ್ಚಿನ ಸಂಖ್ಯೆಯ ಮರಗಳು ಉರುಳಿಬಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net