ಚೀನಾದಲ್ಲಿ ಕೊರೊನಾ ವೈರಸ್​ಗೆ ಇದುವರೆಗೆ 26 ಮಂದಿ ಬಲಿ; ಪ್ರಮುಖ ನಗರಗಳನ್ನು ಬಂದ್​ ಮಾಡಿದ ಸರ್ಕಾರ

Coronavirs 24 Jan 20
Published on

ಬೀಜಿಂಗ್: ಚೀನಾದಲ್ಲಿ ಕೊರೊನಾ ವೈರಸ್​​​ ಪೆಡಂಭೂತದಂತೆ ಕಾಡುತ್ತಿದೆ. ಇದುವರೆಗೆ ಈ ಮಾರಣಾಂತಿಕ ವೈರಸ್​ಗೆ 26 ಮಂದಿ ಬಲಿಯಾಗಿದ್ದಾರೆ. ಸುಮಾರು 830 ಜನರಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.

ಕೊರನಾ ವೈರಸ್​ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾ ಒಟ್ಟು 13 ನಗರಗಳನ್ನು ಬಂದ್​ ಮಾಡಿದೆ.

ಚೀನಾದ ಮಹಾಗೋಡೆಯ ಸುತ್ತಮುತ್ತ ಕೆಲವು ನಗರಗಳು ಸೇರಿ ಬೀಜಿಂಗ್​ನ ಪ್ರಮುಖ ಪ್ರದೇಶಗಳನ್ನು ಬಂದ್​ ಮಾಡಲಾಗಿದೆ.ಈ ಪ್ರದೇಶಗಳಿಂದ ಜನರು, ವಾಹನಗಳು ಹೊರಗೆ ಹೋಗುವುದನ್ನು ಮತ್ತು ಇಲ್ಲಿಗೆ ಪ್ರವೇಶ ಮಾಡುವುದನ್ನು ನಿರ್ಭಂದಿಸಿರುವುದಾಗಿ ಸರ್ಕಾರ ಘೋಷಿಸಿದೆ.

ಪ್ರವಾಸಿಸ್ಥಳಗಳಾದ ಮಿಂಗ್​ ಗೋರಿಗಳು ಮತ್ತು ಯಿನ್ಶಾನ್​ ಪಾಗೋಡಾಗಳನ್ನು ನಾಳೆಯಿಂದ (ಶನಿವಾರ) ಬಂದ್​ ಮಾಡಲಾಗುವುದು ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಬೀಜಿಂಗ್​ನಲ್ಲಿರುವ ಬರ್ಡ್ಸ್​ ನೆಸ್ಟ್​ ಸ್ಟೇಡಿಯಂ ಪ್ರವೇಶವನ್ನು ಈಗಾಗಲೇ ನಿರ್ಬಂಧಿಸಲಾಗಿದೆ.

ಒಟ್ಟು 13 ನಗರಗಳಲ್ಲಿ ಸುಮಾರು 41 ಮಿಲಿಯನ್​ ಜನರ ಸಂಚಾರವನ್ನು ಚೀನಾ ಸರ್ಕಾರ ನಿರ್ಬಂಧಿಸಿದೆ.

2002-2003ರಲ್ಲಿ ಚೀನಾ ಮತ್ತು ಹಾಂಗ್​ಕಾಂಗ್​ಗೆ ಒಕ್ಕರಿಸಿದ್ದ ಸಾರ್ಸ್​ ವೈರಸ್​ ಬರೋಬ್ಬರಿ 650 ಮಂದಿಯನ್ನು ಬಲಿಪಡೆದಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net